ನಿನ್ನ ಸನಿಹಕೆ ಚಿತ್ರದ ಪ್ರೀಮಿಯರ್ ಶೋನಲ್ಲಿ ಸಿಎಂ ಬೊಮ್ಮಾಯಿ

ಬುಧವಾರ, 6 ಅಕ್ಟೋಬರ್ 2021 (11:07 IST)
ಬೆಂಗಳೂರು:ಸೂರಜ್-ಧನ್ಯಾ ರಾಮ್ ಕುಮಾರ್ ಅಭಿನಯದ ‘ನಿನ್ನ ಸನಿಹಕೆ’ ಸಿನಿಮಾದ ಪ್ರೀಮಿಯರ್ ಶೋಗೆ ಸಿಎಂ ಬಸವರಾಜ ಬೊಮ್ಮಾಯಿಗೆ ಆಹ್ವಾನ ನೀಡಲಾಗಿದೆ.


ಈ ಚಿತ್ರದ ಪ್ರೀಮಿಯರ್ ಶೋ ನಾಳೆ ಸಂಜೆ ಪಿವಿಆರ್ ಓರಾಯನ್ ಮಾಲ್ ನಲ್ಲಿ ಆಯೋಜಿಸಲಾಗಿದೆ. ಈ ಪ್ರೀಮಿಯರ್ ಶೋಗೆ ಗಣ್ಯಾತಿಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಈ ಪ್ರೀಮಿಯರ್ ಶೋನ ಮೊದಲ ಟಿಕೆಟ್ ನ್ನು ಸಿಎಂ ಬೊಮ್ಮಾಯಿ ಅವರಿಗೆ ಚಿತ್ರತಂಡ ಕೊಟ್ಟು ಆಹ್ವಾನ ನೀಡಿದೆ. ಈ ಸಂದರ್ಭದಲ್ಲಿ ಚಿತ್ರ ನಿರ್ಮಾಪಕರು, ನಿರ್ದೇಶಕರು, ನಾಯಕ ಸೂರಜ್, ನಾಯಕಿ ಧನ್ಯಾ ಕೂಡಾ ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ