ಮನೆ ಮೇಲೆ ಫೈರಿಂಗ್: ಸಲ್ಮಾನ್ ಖಾನ್‌ ಭೇಟಿಯಾದ ಸಿಎಂ ಏಕನಾಥ್ ಶಿಂಧೆ

Sampriya

ಮಂಗಳವಾರ, 16 ಏಪ್ರಿಲ್ 2024 (19:40 IST)
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ನಡೆದ ನಂತರ ಅವರ ನಿವಾಸಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭೇಟಿ ಕೊಟ್ಟು ಮಾತುಕತೆ ನಡೆಸಿದರು.

ನಟನ ಭೇಟಿ ಬಳಿಕ ಪ್ರತಿಕ್ರಿಯಿಸಿದ ಸಿಎಂ ಶಿಂಧೆ ಅವರು, ಫೈರಿಂಗ್ ಪ್ರಕರಣದಲ್ಲಿ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ. ನಾವು ಸಲ್ಮಾನ್ ಖಾನ್ ಜತೆ ಇದ್ದೇವೆ ಎಂದು ಸಿಎಂ ದೈರ್ಯ ಹೇಳಿದ್ದಾರೆ.

 ಸಿಸಿಟಿವಿ ದೃಶ್ಯಗಳನ್ನು ತನಿಖೆ ಮಾಡಿದ ನಂತರ ಇಬ್ಬರು ಶೂಟರ್‌ಗಳನ್ನು ಗುರುತಿಸಿದ್ದಾರೆ ಮತ್ತು ಅವರನ್ನು ಗುಜರಾತ್‌ನ ಭುಜ್‌ನಲ್ಲಿ ಬಂಧಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಮಂಗಳವಾರ ಮುಂಬೈನ ಕಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇಬ್ಬರು ಆರೋಪಿಗಳು ಏಪ್ರಿಲ್ 25 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದಾರೆ. ಇನ್ನೂ ಸಲ್ಮಾನ್ ಖಾನ್ ಹತ್ಯೆಯ ದೃಷ್ಟಿಯಿಂದಲೇ ಗುಂಡಿನ ದಾಳಿ ನಡೆಸಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇನ್ನೂ ಆರೋಪಿಗಳಿಗೆ ಅಂತಾರಾಷ್ಟ್ರೀಯ ಸಂಪರ್ಕವಿರುವ ತನಿಖೆ ನಡೆಸಲು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ದಾಳಿಗೆ ಬಳಸಿದ ಆಯುಧಗಳು ಇನ್ನೂ ಪತ್ತೆಯಾಗಿಲ್ಲ.  

ನಿನ್ನೆ, ನಟ ತನ್ನ ನಿವಾಸದಿಂದ ಹೊರಬಂದಿರುವುದನ್ನು ಗುರುತಿಸಲಾಗಿದೆ. ಬಿಗಿ ಭದ್ರತೆಯ ನಡುವೆ ಸಲ್ಮಾನ್ ನಿವಾಸದಿಂದ ಹೊರಬರುತ್ತಿರುವುದು ಕಂಡುಬಂದಿದೆ. ಈ ವಿಡಿಯೋದಲ್ಲಿ ಸಲ್ಮಾನ್ ಖಾನ್ ತಮ್ಮ ಕಟ್ಟಡದಿಂದ ಹೊರಗೆ ಬರುತ್ತಿರುವುದು ಕಂಡು ಬಂದಿದೆ. ಅವರ ಕಾರಿನ ಮುಂದೆ ಮತ್ತು ಹಿಂದೆ ಪೊಲೀಸ್ ವಾಹನಗಳ ಬೆಂಗಾವಲು ಕಾಣಬಹುದು. ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಹಲವಾರು ಪೊಲೀಸರು ಗಸ್ತು ತಿರುಗುತ್ತಿರುವುದನ್ನು ಕಾಣಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ