ಟೈಟಲ್ ಮೂಲಕ ಕ್ರೇಜ್ ಹುಟ್ಟುಹಾಕಿರುವ ಬಿಲ್ಗೇಟ್ಸ್ ಚಿತ್ರ ಫೆಬ್ರವರಿ 7ಕ್ಕೆ ಬಿಡುಗಡೆಯಾಗುತ್ತಿದೆ. ಚಂದನವನದ ಸ್ಟಾರ್ ಕಾಮಿಡಿ ಆಕ್ಟರ್ ಚಿಕ್ಕಣ್ಣ, ಶಿಶಿರ್ ಶಾಸ್ತ್ರಿ ಅಭಿನಯದ ಬಿಲ್ಗೇಟ್ಸ್ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಟೀಸರ್ ಮೂಲಕ ಸಣ್ಣ ಝಲಕ್ ತೋರಿರುವ ಈ ಚಿತ್ರ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ. ಚಿಕ್ಕಣ್ಣನ ಬಿಲ್ ಗೇಟ್ಸ್ ಅವತಾರ ನೋಡಲು, ಕಾಮಿಡಿ ಕಚಗುಳಿ ಕಣ್ತುಂಬಿಕೊಳ್ಳಲು ಸಿನಿ ಪ್ರೇಕ್ಷಕರು ಫೆಬ್ರವರಿ 7ರವರೆಗೆ ಕಾಯಬೇಕಷ್ಟೆ.
ಬಿಲ್ ಗೇಟ್ಸ್ ಕಾಮಿಡಿ ಎಂಟಟೈನ್ಮೆಂಟ್ ಚಿತ್ರವಾಗಿದ್ದು, ನೋಡುಗರಿಗೆ ಹಾಸ್ಯದ ರಸದೌತಣ ಸಿಗೋದಂತು ಗ್ಯಾರಂಟಿ ಎನ್ನುತ್ತಿದೆ ಚಿತ್ರತಂಡ. ಅದ್ದೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು ಶ್ರೀನಿವಾಸ. ಸಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಕುರಿ ಪ್ರತಾಪ್, ಬ್ಯಾಂಕ್ ಜನಾರ್ಧನ್, ವಿ. ಮನೋಹರ್ ಚಿತ್ರದಲ್ಲಿ ನಟಿಸಿದ್ದಾರೆ. ರಶ್ಮಿತ ರೋಜಾ, ಅಕ್ಷರಾ ರೆಡ್ಡಿ ಚಿತ್ರದಲ್ಲಿ ನಾಯಕಿಯರಾಗಿ ಮಿಂಚಿದ್ದಾರೆ. ಕೆಜಿಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಈ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದು, ನೊಬಿನ್ ಪೌಲ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.