ಸಾಹಸ ಸಿಂಹನ 13ನೇ ವರ್ಷದ ಪುಣ್ಯ ಸ್ಮರಣೆ

ಶುಕ್ರವಾರ, 30 ಡಿಸೆಂಬರ್ 2022 (18:28 IST)
ಸಾಹಸಸಿಂಹ ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್ ಅಗಲಿ ಇಂದಿಗೆ 13 ವರ್ಷವಾಗಿದೆ.ವಿಷ್ಣು ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಚಿತ್ರರಂಗದ ಕಲಾವಿದರು, ಅಭಿಮಾನಿಗಳು, ರಾಜಕೀಯ ಗಣ್ಯರು ಸ್ಮರಣೆ ಮಾಡುತ್ತಿದ್ದು,ಪುಣ್ಯಸ್ಮರಣೆಯ ಹಿನ್ನಲೆಯಲ್ಲಿ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
 
ರಾಜ್ಯಾದ್ಯಂತ ಅಭಿಮಾನಿಗಳಿಂದ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು,ಅಭಿಮಾನಿಗಳು ವಿಷ್ಣುವರ್ಧನ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.ಕುಟುಂಬ ಸದಸ್ಯರು ಮೈಸೂರಿನಲ್ಲಿ ಸ್ಮಾಕರದ ಬಳಿ ಪೂಜೆ ಸಲ್ಲಿಸಿದ್ದು,ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್, ಮಗಳು ಕೀರ್ತಿ, ಅಳಿಯ ಅನಿರುದ್ಧ್ ಮೈಸೂರಿಗೆ ಪಯಣಿಸಿದ್ದಾರೆ.ಸ್ಮಾರಕದ ಬಳಿ ದಾದಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದಾಗಿ  ಮಾಹಿತಿ ನೀಡಿದ್ದು,ಕಳೆದ ಕೆಲ ವರ್ಷಗಳಿಂದ ಕುಟುಂಬ ಸದಸ್ಯರು ಅಲ್ಲಿನ ಅಭಿಮಾನಿಗಳ ಜೊತೆ ಅಲ್ಲೇ ಪೂಜೆ ಸಲ್ಲಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ