ಎಲ್ಲರಿಗೂ ದೇವರೊಬ್ಬರೇ ಬಾಸ್’- ನಟ ಡಾ. ಶಿವರಾಜ್ಕುಮಾರ್
ಎಲ್ಲರಿಗೂ ಬಾಸ್ ಒಬ್ಬರೇ.. ಅದು ದೇವರು.. ಏಕೆ ಬಾಸ್ ಬಾಸ್ ಅಂತಾ ಒದ್ದಾಡ್ತೀರಾ ಎಂದು ನಟ ಡಾ. ಶಿವರಾಜ್ಕುಮಾರ್ ಹೇಳಿದ್ದಾರೆ. ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ ಡಾ.ರಾಜ್ ಕುಮಾರ್ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಆಯೋಜಿಸಿದ್ದ ಮೈಸೂರು ರಿಫ್ರೆಶ್ಮೆಂಟ್ ಮಾಲೀಕ ವಿಶ್ವ ಅವರನ್ನು ಯುವಕನೋರ್ವ ನಮ್ಮ ಬಾಸ್ ಅಂದು ಹೇಳಿದ್ದಾನೆ. ಇದಕ್ಕೆ ಶಿವರಾಜ್ಕುಮಾರ್ ಪ್ರತಿಕ್ರಿಯಿಸಿದ್ದು, ಎಲ್ಲರ ಮನೆಯಲ್ಲೂ ಒಬ್ಬೊಬ್ಬ ಬಾಸ್ ಇರುತ್ತಾನೆ. ಎಲ್ಲರ ಹೃದಯದಲ್ಲೂ ಒಬ್ಬ ಬಾಸ್ ಇರ್ತಾನೆ. ಅವರ ಮನೆಗೆ ಅವನೇ ಬಾಸ್ ಎಂದು ಹೇಳಿದ್ರು.