ಕೌನ್ ಬನೇಗಾ ಕರೋಡ್‌ಪತಿ: ₹50 ಲಕ್ಷ ಗೆದ್ದು ಬೀಗಿದ ಸಾಮಾನ್ಯ ವೆಲ್ಡರ್‌ನ ಮಗ

Sampriya

ಭಾನುವಾರ, 12 ಜನವರಿ 2025 (15:38 IST)
Photo Courtesy X
ಬಾಗಲಕೋಟೆ: ಬಾಲಿವುಡ್‌ ಸ್ಟಾರ್‌ ಅಮಿತಾಬ್‌ ಬಚ್ಚನ್‌ ನಡೆಸಿಕೊಡುವ ರಿಯಾಲಿಟಿ ಶೋ ಆಗಿರುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಯುವಕ ₹ 50 ಲಕ್ಷ ಗೆದ್ದು ಬೀಗಿದ್ದಾನೆ.

ಮಹಾಲಿಂಗಪುರ ಪಟ್ಟಣದ ರಂಜಾನ್‌ ಮಲಿಕ್ ಸಾಬ್ ಫೀರಜಾದೆ ಬಾಲಿವುಡ್‌ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಪ್ರಶ್ನೆಗಳಿಗೆ ಉತ್ತರಿಸಿ ₹ 50 ಲಕ್ಷ ಜೇಬಿಗಿಳಿಸಿಕೊಂಡಿದ್ದಾನೆ.

ರಮ್‌ಜಾನ್‌ ಮಲಿಕ್ ಸಾಬ್ ಫೀರಜಾದೆ ಮೊದಲು ತನ್ನ ತಂದೆಯ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡಿದ್ದರು. ನಂತರ ಚಹಾ, ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ವಾಚ್ ಮನ್ ಆಗಿ ಕೆಲಸ‌ ಮಾಡಿದ್ದರು.  

ಬಿಎ ಪದವಿ ಮುಗಿಸಿರುವ ಮಲೀಕ್‌ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಕೆಬಿಸಿ ರಸಪ್ರಶ್ನೆಗೆ ಆಯ್ಕೆಯಾಗಿದ್ದ ಜಟಿಲ ಪ್ರಶ್ನೆಗಳಿಗೆ ಉತ್ತರಿಸಿ ಅಮಿತಾಬ್ ಬಚ್ಚನ್ ಅವರಿಂದ ಶಹಬ್ಬಾಸ್‌ ಗಿರಿ ಪಡೆದಿದ್ದಾರೆ. ಮಲೀಕ್ ಸಾಧನೆಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ