ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ನಟ ಶಿವರಾಜ್ ಕುಮಾರ್ ಚಿಕಿತ್ಸೆಗೆಂದು ನಿನ್ನೆಯೇ ಅಮೆರಿಕಾಗೆ ತೆರಳಿದ್ದಾರೆ. ಶಿವಣ್ಣ ಚಿಕಿತ್ಸೆ ಪಡೆಯಲಿರುವ ಆಸ್ಪತ್ರೆ ಯಾವುದು, ವೈದ್ಯರು ಯಾರು ಇಲ್ಲಿದೆ ವಿವರ.
ಕ್ಯಾನ್ಸರ್ ರೋಗಕ್ಕೆಂದು ಶಿವಣ್ಣ ಚಿಕಿತ್ಸೆ ಪಡೆಯಲಿದ್ದಾರೆ. ಅವರು ದಾಖಲಾಗುವುದು ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ. ಇಲ್ಲಿ ಕ್ಯಾನ್ಸರ್ ರೋಗಕ್ಕೆ ವಿಶೇಷವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಶಿವಣ್ಣ ಸರ್ಜರಿಗೊಳಗಾಗಲಿದ್ದಾರೆ.
ಭಾರತೀಯ ಮೂಲದ ವೈದ್ಯ ಡಾ ಮುರುಗೇಶ್ ಸರ್ಜರಿ ನಡೆಸಲಿದ್ದಾರೆ. ಸ್ತನ ಕ್ಯಾನ್ಸರ್, ಶ್ವಾಸಕೊಶ, ಮೆದುಳು, ಗಂಟಲು ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ವಿಶ್ವದಾದ್ಯಂತ ಹೆಸರು ಮಾಡಿರುವ ಪ್ರತಿಷ್ಠಿತ ಆಸ್ಪತ್ರೆಯಾಗಿದ್ದು ಇಲ್ಲಿ ಶಿವಣ್ಣ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ.
ಡಿಸೆಂಬರ್ 24 ರಂದು ಇದೇ ಆಸ್ಪತ್ರೆಯಲ್ಲಿ ವೈದ್ಯ ಡಾ ಮುರುಗೇಶ್ ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಜನವರಿ 25 ರಂದು ಶಿವಣ್ಣ ಭಾರತಕ್ಕೆ ಮರಳಲಿದ್ದಾರೆ.