ಗೋವಾ ಕಡಲತೀರದಲ್ಲಿ ಡಾರ್ಲಿಂಗ್ ಕೃಷ್ಣ ಶುಗರ್ ಫ್ಯಾಕ್ಟರಿ

ಸೋಮವಾರ, 29 ಮಾರ್ಚ್ 2021 (10:20 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ಶುಗರ್ ಫ್ಯಾಕ್ಟರಿ ಸಿನಿಮಾದ ಚಿತ್ರೀಕರಣ ಗೋವಾದ ಕಡಲ ತೀರದಲ್ಲಿ ಭರದಿಂದ ಸಾಗಿದೆ.


ಮದುವೆಯ ಬಳಿಕ ಡಾರ್ಲಿಂಗ್ ಕೃಷ್ಣ ಈಗ ಶೂಟಿಂಗ್ ಗೆ ಮರಳಿದ್ದು, ಗೋವಾದಲ್ಲಿ ಕೆಲವು ಹಾಡುಗಳ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಹಾಡಿನ ಜೊತೆಗೆ ಕೆಲವು ದೃಶ್ಯಗಳು, ಫೈಟಿಂಗ್ ಸೀಕ್ವೆನ್ಸ್ ನ ಚಿತ್ರೀಕರಣವನ್ನೂ ಇಲ್ಲಿ ನಡೆಸಲು ಚಿತ್ರತಂಡ ತಯಾರಿ ನಡೆಸಿದೆ.

ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣಗೆ ನಾಯಕಿಯಾಗಿ ಸೊನಾಲ್ ಮೊಂಟಾರಿಯೋ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಸುಮಾರು 24 ದಿನಗಳ ಕಾಲ ಗೋವಾದಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ತಯಾರಿ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ