ಗಂಧದ ಗುಡಿ ಟೀಸರ್ ಮೆಚ್ಚಿದ ರಾಜಮೌಳಿ

ಬುಧವಾರ, 8 ಡಿಸೆಂಬರ್ 2021 (17:17 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಗಂಧದ ಗುಡಿ ಸಾಕ್ಷ್ಯಚಿತ್ರ ಟೀಸರ್ ನೋಡಿದ ಖ್ಯಾತ ನಿರ್ದೇಶಕ ಎಸ್. ರಾಜಮೌಳಿ ಮೆಚ್ಚುಗೆಯ ಮಾತನಾಡಿದ್ದಾರೆ.

ಗಂಧದ ಗುಡಿ ಟೀಸರ್ ವೀಕ್ಷಿಸಿ ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದು ನಿಜವಾಗಿಯೂ ಪುನೀತ್ ರಾಜ್ ಕುಮಾರ್ ಗೆ ತಕ್ಕುದಾದ ಕೊಡುಗೆ ಎಂದು ಹೊಗಳಿದ್ದಾರೆ.

‘ಗಂಧದ ಗುಡಿ ಟೀಸರ್ ಅದ್ಭುತವಾಗಿದೆ ಮತ್ತು ಪುನೀತ್ ಗೆ ಹೃದಯ ಪೂರ್ವಕ ಮತ್ತು ಪ್ರಾಮಾಣಿಕ ಕೊಡುಗೆಯಾಗಲಿದೆ. ಕರ್ನಾಟಕದ ವೈಭವವನ್ನು ದೃಶ್ಯ ರೂಪದಲ್ಲಿ ತೋರಿಸುವ ಪುನೀತ್ ಕನಸು ನನಸಾಗಿದೆ. ಇಡೀ ತಂಡಕ್ಕೆ ನನ್ನ ಶುಭ ಹಾರೈಕೆಗಳು’ ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ