ಜಾಮೀನು ತುರ್ತು ವಿಚಾರಣೆ ಮಾಡಲು ದರ್ಶನ್‌ ಹೈಕೋರ್ಟ್‌ಗೆ ಮನವಿ

Sampriya

ಬುಧವಾರ, 16 ಅಕ್ಟೋಬರ್ 2024 (20:31 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ ನಟ ದರ್ಶನ್ ಅವರಿಗೆ ಜಾಮೀನು ನೀಡಲು 57ನೇ ಸಿಸಿಎಚ್ ನ್ಯಾಯಾಲಯ ನಿರಾಕರಣೆ ಮಾಡಿದ ಬೆನ್ನಲ್ಲೇ ಜಾಮೀನು ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ತುರ್ತು ವಿಚಾರಣೆಗೆ ಕೋರಿ ಮೆಮೋ ಹಾಕಿದ್ದಾರೆ. ಆದರೆ ಅಕ್ಟೋಬರ್ 22ರಂದು ದರ್ಶನ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಅದಲ್ಲದೆ ಪ್ರಕರಣದ ಎ1ಆರೋಪಿ ಪವಿತ್ರಾಗೌಡ ಕೂಡ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇತರೆ ಆರೋಪಿಗಳಾದ ಅನುಕುಮಾರ್, ಪ್ರದೋಷ್ ಮತ್ತು ವಿನಯ್ ಅರ್ಜಿಗಳನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿದೆ. ಇನ್ನೂ ಜಾಮೀನು ಸಿಕ್ಕಿರುವ  ಮೂರು ದಿನ ಕಳೆದರೂ ಪರಪ್ಪನ ಅಗ್ರಹಾರದಲ್ಲಿರುವ ದೀಪಕ್, ತುಮಕೂರು ಜೈಲಲ್ಲಿರುವ ರವಿಶಂಕರ್ ಇನ್ನೂ ಬಿಡುಗಡೆಯಾಗಿಲ್ಲ. ಜಾಮೀನು ಪ್ರಕ್ರಿಯೆ ಮುಗಿಯದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಈ ಮಧ್ಯೆ, ಬೆನ್ನು ನೋವಿಂದ ಬಳಲ್ತಿರುವ ನಟ ದರ್ಶನ್‌ಗೆ ಕೊನೆಗೂ ಮೆಡಿಕಲ್ ಬೆಡ್, ದಿಂಬು ಮತ್ತು ಚೇರ್‌ಗಳನ್ನು ಜೈಲಾಧಿಕಾರಿಗಳು ಒದಗಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ