ದರ್ಶನ್ ಗೀಗ ತೋಟದ ಮನೆಯ ನೆನಪು: ಕೋರ್ಟ್ ನಿಂದ ಮತ್ತೊಂದು ರಿಲೀಫ್

Krishnaveni K

ಶುಕ್ರವಾರ, 20 ಡಿಸೆಂಬರ್ 2024 (10:39 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಈಗ ಒಂದೊಂದೇ ಬೇಡಿಕೆಗಳನ್ನು ನ್ಯಾಯಾಲಯದ ಮುಂದಿಡುತ್ತಿದ್ದಾರೆ. ದರ್ಶನ್ ಗೀಗ ತಮ್ಮ ತೋಟದ ಮನೆಯ ನೆನಪಾಗಿದೆ.

ಮೊದಲು ಬೆನ್ನು ನೋವಿನ ನೆಪದಲ್ಲಿ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಮದಿದ್ದರು. ಇದಾದ ಬಳಿಕ ಅವರು ಬರೋಬ್ಬರಿ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದರು. ಕಳೆದ ವಾರ ರೆಗ್ಯುಲರ್ ಜಾಮೀನು ಸಿಗುತ್ತಿದ್ದಂತೇ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಮನೆಗೆ ಹೋಗಿದ್ದರು.

ಇದೀಗ ದರ್ಶನ್ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಅಪಾರ್ಟ್ ಮೆಂಟ್ ನಲ್ಲಿದ್ದಾರೆ. ಇದೀಗ ಮತ್ತೆ ದರ್ಶನ್ ಕೋರ್ಟ್ ಮೊರೆ ಹೋಗಿದ್ದು ಈ ಬಾರಿ ಮೈಸೂರಿಗೆ ಹೋಗಲು ಅನುಮತಿ ಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನು ಕೋರ್ಟ್ ಕೂಡಾ ಪುರಸ್ಕರಿಸಿದೆ.

ರೆಗ್ಯುಲರ್ ಜಾಮೀನು ನೀಡುವಾಗ ಕೋರ್ಟ್ ಕೆಲವೊಂದು ಷರತ್ತು ವಿಧಿಸಿತ್ತು. ಅದರಂತೆ ಸೆಷನ್ಸ್ ಕೋರ್ಟ್ ಪರಿಮಿತಿ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂದಿದೆ. ಆದರೆ ದರ್ಶನ್ ಗೆ ಈಗ ತಮ್ಮ ತೋಟದ ಮನೆಗೆ ಹೋಗುವ ಆಸೆಯಾಗಿದೆ. ಈ ಕಾರಣಕ್ಕೆ ಮತ್ತೆ ಕೋರ್ಟ್ ಮೊರೆ ಹೋಗಿದ್ದು, ಮೈಸೂರಿಗೆ ಹೋಗಲು ಅನುಮತಿ ಕೇಳಿದ್ದಾರೆ. ಇದನ್ನು ಕೋರ್ಟ್ ಕೂಡಾ ಪುರಸ್ಕರಿಸಿದ್ದು, 15 ದಿನಗಳಿಗೆ ಮೈಸೂರಿಗೆ ಹೋಗಲು ಅನುಮತಿ ಸಿಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ