ದಿಢೀರನೇ ದರ್ಶನ್ ಆಸ್ಪತ್ರೆಯ ಮಂಚದಲ್ಲಿ ಮಲಗಿರುವ ಫೋಟೋ ರಿವೀಲ್‌: ಏನಿದರೆ ಅರ್ಥ

Sampriya

ಸೋಮವಾರ, 2 ಡಿಸೆಂಬರ್ 2024 (17:14 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ ಅವರ ಫೋಟೋವೊಂದು ವೈರಲ್ ಆಗಿದೆ.

ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ದರ್ಶನ್ ಅವರು  ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಆರೋಗ್ಯ ವಿಚಾರವಾಗಲಿ, ಅವರ ಫೋಟೋವಾಗಲಿ ಹೊರಬಂದಿರಲಿಲ್ಲ. ಇದೀಗ ದರ್ಶನ್ ಆಸ್ಪತ್ರೆ ಮಂಚದ ಮೇಲೆ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಳ್ಳಾರಿ ಜೈಲಿನಲ್ಲಿ ತೀವ್ರವಾದ ಬೆನ್ನುನೋವು ಕಾಣಿಸಿಕೊಂಡ ಪರಿಣಾಮ ಹೈಕೋರ್ಟ್ ಚಿಕಿತ್ಸೆಯ ಸಲುವಾಗಿ ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇದೀಗ ದರ್ಶನ್ ಜಾಮೀನು ಅವಧಿ ಮುಗಿಯಲು ಕೇವಲ ಒಂದು ವಾರ ಬಾಕಿ ಇದೆ. 33 ದಿನಗಳಲ್ಲಿ ಫಿಸಿಯೋಥೆರಪಿ ಮಾಡಿಸಿಕೊಂಡ ದರ್ಶನ್ ಇದೀಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.  ಈ ಮೂಲಕ ಮಧ್ಯಂತರ ಜಾಮೀನನ್ನು ಮತ್ತಷ್ಟು ಮುಂದೂಡಲು ದರ್ಶನ್ ಪ್ಲ್ಯಾನ್ ಮಾಡಿದ್ದಾರೆಂಬ ಆರೋಪವು ಕೇಳಿಬಂದಿತ್ತು.

ಇದುವರೆಗೆ ದರ್ಶನ್ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಡ ದರ್ಶನ್ ಕುಟುಂಬಸ್ಥರು ಇದೀಗ ದಿಡೀರನೇ  ಫೋಟೊ ‌ಬಿಡುಗಡೆ ಮಾಡಿದ್ದಾರೆ. ದರ್ಶನ್ ಚಿಕಿತ್ಸೆ ಬಗ್ಗೆ ಪ್ರಾಸಿಕ್ಯೂಶನ್‌ಗೆ ಅನುಮಾನ ಮೂಡಿದ್ದು ಕೋರ್ಟ್ ಸಹ ದರ್ಶನ್ ಆರೋಗ್ಯದ ಬಗ್ಗೆ ವಿಚಾರಿಸಿತ್ತು. ಇದರ ಬೆನ್ನಲ್ಲೆ ಫೋಟೋ ಬಿಡುಗಡೆಯಾಗಿರುವುದು ಹಲವು ಅನುಮಾನ ಮೂಡಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ