ಹತ್ತಿರವೇ ಇದ್ದರೂ ಮಾತಿಲ್ಲ ಕತೆಯಿಲ್ಲ! ಸುಮಲತಾ ಪಾರ್ಟಿಯಲ್ಲಿ ಕಿಚ್ಚ-ದರ್ಶನ್
ಸಾಮಾನ್ಯವಾಗಿ ಇಬ್ಬರ ನಡುವೆ ಶೀತಲ ಸಮರವಿರುವುದರಿಂದ ಒಬ್ಬರು ಬರುವ ಕಾರ್ಯಕ್ರಮಕ್ಕೆ ಇನ್ನೊಬ್ಬರು ಗೈರಾಗುತ್ತಿದ್ದರು. ಆದರೆ ಈ ಬಾರಿ ಸುಮಲತಾ ಅಂಬರೀಶ್ ಹುಟ್ಟುಹಬ್ಬಕ್ಕೆ ಇಬ್ಬರೂ ಸ್ಟಾರ್ ಗಳು ಆಗಮಿಸಿದ್ದರು.
ಬಹಳ ವರ್ಷಗಳ ನಂತರ ದಾಸ ಮತ್ತು ಕಿಚ್ಚನನ್ನು ಒಂದೇ ವೇದಿಕೆಯಲ್ಲಿ ಜೊತೆಯಾಗಿ ನೋಡಿ ಅಭಿಮಾನಿಗಳೂ ಖುಷಿಯಾಗಿದ್ದರು. ಈಗಲಾದರೂ ಈ ಇಬ್ಬರು ಸ್ಟಾರ್ ನಟರು ಮುನಿಸು ಮರೆತು ಜೊತೆಯಾಗಲಿ ಎಂದು ಎಲ್ಲರೂ ಹಾರೈಸಿದ್ದಾರೆ. ಆದರೆ ಒಂದೇ ವೇದಿಕೆಯಲ್ಲಿದ್ದರೂ ಇಬ್ಬರೂ ಪರಸ್ಪರ ಅಂತರ ಕಾಯ್ದಿದ್ದರು. ಸನಿಹವೇ ಇದ್ದರೂ ಪರಸ್ಪರ ಮಾತನಾಡಲೂ ಇಲ್ಲ.