ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಸದ್ಯಕ್ಕೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಮುಂದೆ ಏನು ಮಾಡಬಹುದು ಎಂಬ ಕುತೂಹಲ ಎಲ್ಲರಿಗಿದೆ.
ನಟ ದರ್ಶನ್ ಈ ಮೊದಲು ಬೆನ್ನು ನೋವಿನ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಆಗ ಅವರಿಗೆ ಚಿಕಿತ್ಸೆಗೆ ಮಾತ್ರ ಅವಕಾಶವಿತ್ತು. ಆದರೆ ಈಗ ರೆಗ್ಯುಲರ್ ಜಾಮೀನು ಸಿಕ್ಕಿದ್ದು ಒಂದು ರೀತಿಯಲ್ಲಿ ಅವರು ಫ್ರೀ ಬರ್ಡ್ ಆಗಿದ್ದಾರೆ.
ಆದರೆ ದರ್ಶನ್ ಗೆ ಬೇಕಾಬಿಟ್ಟಿ ಇರುವಂತಿಲ್ಲ. ಯಾಕೆಂದರೆ ಅವರ ಮೇಲೆ ಪೊಲೀಸರ ಕಣ್ಣು ಇದ್ದೇ ಇರುತ್ತದೆ. ಬೆನ್ನು ನೋವಿನ ನೆಪ ಹೇಳಿ ಜಾಮೀನು ಪಡೆದಿರುವ ದರ್ಶನ್ ಗೆ ಈಗ ರೆಗ್ಯುಲರ್ ಜಾಮೀನು ಸಿಕ್ಕರೂ ಅದರ ವಿರುದ್ಧ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಹೊರಟಿದ್ದಾರೆ.
ಸದ್ಯಕ್ಕೆ ಅವರು ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳುವುದು ಕಷ್ಟ. ದರ್ಶನ್ ಸದ್ಯಕ್ಕಂತೂ ತಮ್ಮ ಬೆನ್ನು ನೋವಿನ ಸಮಸ್ಯೆ ಸರಿಪಡಿಸಿಕೊಳ್ಳಬೇಕಿದೆ. ಇಲ್ಲದೇ ಹೋದರೆ ಕೋರ್ಟ್ ನಲ್ಲಿ ಕೇಳುವ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಇದರ ನಡುವೆ ಆಗಾಗ ಕೋರ್ಟ್ ಕರೆಯುವಾಗ ವಿಚಾರಣೆಗೆಂದು ಹಾಜರಾಗಬೇಕಾಗುತ್ತದೆ. ಆದರೆ ತಮ್ಮ ಕುಟುಂಬದ ಜೊತೆ ಕಾಲ ಕಳೆಯುವುದಕ್ಕೆ ಸಮಸ್ಯೆಯಿಲ್ಲ. ಸದ್ಯಕ್ಕೆ ದರ್ಶನ್ ನಂಬಿಕೊಂಡು ಹಲವು ನಿರ್ಮಾಪಕರಿದ್ದಾರೆ. ಅವರ ಡೆವಿಲ್ ಸಿನಿಮಾ ಶೂಟಿಂಗ್ ಅರ್ಧದಲ್ಲಿದೆ. ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಬಾಕಿಯಿದೆ. ತರುಣ್ ಸುಧೀರ್ ಕೂಡಾ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ಆದರೆ ಇದೆಲ್ಲವೂ ಸದ್ಯಕ್ಕಂತೂ ಆಗುವುದು ಡೌಟ್.