ದರ್ಶನ್ ಬೆನ್ನು ಮಂಗ ಮಾಯ, ಆಸ್ಪತ್ರೆಯಿಂದ ಡಿಸ್ಚಾರ್ಜ್

Krishnaveni K

ಸೋಮವಾರ, 16 ಡಿಸೆಂಬರ್ 2024 (14:37 IST)
ಬೆಂಗಳೂರು: ರೆಗ್ಯುಲರ್ ಜಾಮೀನು ಸಿಕ್ಕುತ್ತಿದ್ದಂತೇ ಬೆನ್ನು ನೋವು ಮಂಗಮಾಯವಾಗಿದ್ದು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಲ್ಲಿದ್ದ ದರ್ಶನ್ ಗೆ ಬೆನ್ನು ನೋವಿನ ಶಸ್ತ್ರಚಿಕಿತ್ಸೆ ನೆಪದಲ್ಲಿ ಮಧ್ಯಂತರ ಜಾಮೀನು ಸಿಕ್ಕಿತ್ತು. ಇದಾದ ಬಳಿಕ ಅವರು ಬಿಜಿಎಸ್ ಅಸ್ಪತ್ರೆಗೆ ದಾಖಲಾಗಿದ್ದರು. ಆದರೆ ಒಂದು ತಿಂಗಳವರೆಗೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರಲಿಲ್ಲ.

ಇತ್ತೀಚೆಗೆ ರೆಗ್ಯುಲರ್ ಜಾಮೀನು ತೀರ್ಪಿನ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆದಿದೆ ಎಂಬ ಸುದ್ದಿಗಳಿತ್ತು. ಆದರೆ ಈಗ ರೆಗ್ಯುಲರ್ ಜಾಮೀನು ಸಿಕ್ಕ ಬೆನ್ನಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಹೀಗಾಗಿ ಶಸ್ತ್ರಚಿಕಿತ್ಸೆ ಎಲ್ಲವೂ ನೆಪವಾಗಿತ್ತೇ ಎಂಬ ಪ್ರಶ್ನೆ ಮೂಡಿದೆ.

ಬಳ್ಳಾರಿ ಜೈಲಿನಲ್ಲಿದ್ದಾಗ ನಡೆದಾಡಲೂ ಕಷ್ಟಪಡುತ್ತಿದ್ದರು. ಆಗ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಇದ್ದರೆ ಲಕ್ವ ಹೊಡೆಯಬಹುದು ಎಂದು ಅವರ ಪರ ವಕೀಲರು ಹೇಳಿದ್ದರು. ಕಳೆದ ವಾರವೂ ವಕೀಲರು ಬಿಪಿ ಹೆಚ್ಚು ಕಡಿಮೆಯಾಗುತ್ತಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿಲ್ಲ ಎಂಬ ವೈದ್ಯಕೀಯ ವರದಿ ಸಲ್ಲಿಸಿದ್ದರು. ಈಗ ನೋಡಿದರೆ ಅವರು ಸಂಪೂರ್ಣವಾಗಿ ಗುಣಮುಖರಾದಂತೆ ಕಂಡುಬರುತ್ತಿದೆ. ಹೀಗಾಗಿ ಬೆನ್ನುನೋವೆಲ್ಲಾ ನಾಟಕವೇ ಎಂಬ ಪ್ರಶ್ನೆ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ