ಟಿವಿ ರೂಮರ್ ಗಳಿಗೆ ತೆರೆ ಎಳೆದ ಡಿ ಬಾಸ್ ದರ್ಶನ್

ಶುಕ್ರವಾರ, 6 ಡಿಸೆಂಬರ್ 2019 (09:48 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯದಲ್ಲೇ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಊಹಾಪೋಹವೊಂದು ಇಷ್ಟು ದಿನ ಓಡಾಡುತ್ತಿತ್ತು. ಅದಕ್ಕೀಗ ಅವರೇ ಸ್ಪಷ್ಟನೆ ನೀಡಿದ್ದಾರೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಗ್ಗೆ ಓಡಾಡುತ್ತಿರುವ ಸುದ್ದಿಗಳನ್ನು ನಗುತ್ತಲೇ ನಿರಾಕರಿಸಿದ್ದಾರೆ. ನಾನು ಸದ್ಯಕ್ಕೆ ಸಿನಿಮಾ ಬಗ್ಗೆ ಮಾತ್ರ ಗಮನಕೇಂದ್ರೀಕರಿಸಿರುವುದಾಗಿ ಹೇಳಿದ್ದಾರೆ.

ಕಿರುತೆರೆ ಎಂದರೆ ದಿನಾ ಅದಕ್ಕೋಸ್ಕರ ಸಮಯ ಮೀಸಲಿಡಬೇಕು. ಸದ್ಯಕ್ಕೆ ನನಗೆ ಎರಡು ದೋಣಿಯಲ್ಲಿ ಕಾಲಿಡಲು ಸಾಧ‍್ಯವಿಲ್ಲ. ಹೀಗಾಗಿ ಸಿನಿಮಾ ಮಾತ್ರ ನನ್ನ ಆದ್ಯತೆ ಎಂದಿದ್ದಾರೆ. ಅಲ್ಲಿಗೆ ದರ್ಶನ್ ಕಿರುತೆರೆಯಲ್ಲಿ ನೋಡುವ ಭಾಗ್ಯ ಸದ್ಯಕ್ಕಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ