ಮೈಸೂರು ದಸರಾದ ಆಹಾರ ಮೇಳದಲ್ಲಿ ಹೊಸ ಉದ್ಯಮ ಶುರು ಮಾಡಿದ ದರ್ಶನ್ ಅಳಿಯ ಚಂದು

Sampriya

ಮಂಗಳವಾರ, 23 ಸೆಪ್ಟಂಬರ್ 2025 (15:10 IST)
Photo Credit X
ಬೆಂಗಳೂರು: ನಟ ದರ್ಶನ್ ಅವರ ಅಳಿಯ ದಸರಾ ಪ್ರಯುಕ್ತ ನಡೆಯುತ್ತಿರುವ ಆಹಾರ ಮೇಳದಲ್ಲಿ ನೆಮ್ಮದಿ ಎಂಬ ಹೆಸರಿನಲ್ಲಿ ನಾನ್‌ ವೆಜ್‌ ಸ್ಟಾಲ್‌ವೊಂದನ್ನು ತೆರೆದಿದ್ದಾರೆ.  ಈ ಸ್ಟಾಲ್‌ಗೆ ಅವರ ಅಜ್ಜಿ, ಮೀನಾ ತೂಗುದೀಪ್ ಅವರು ಕೂಡಾ ಬಂದಿದ್ದರು. 

ಇನ್ನೂ ಆಹಾರ ಪ್ರಿಯರು ಸ್ಟಾಲ್‌ಗೆ ಭೇಟಿ ನೀಡಿ, ರುಚಿ ನೋಡುತ್ತಿದ್ದಾರೆ. ಜತೆಗೆ ದರ್ಶನ್ ಅಕ್ಕನ ಮಗ ಚಂದು ಜತೆ ಫೋಟೋ ಕ್ಲಿಕ್ಕಿಸಿ ಖುಷಿ ಪಡುತ್ತಿದ್ದಾರೆ. 

ಸಿನಿಮಾ ರಂಗಕ್ಕೆ ಪ್ರವೇಶಕ್ಕೆ ಭರ್ಜರಿ ತಯಾರಿ ನಡೆಸುತ್ತಿರುವ ಚಂದು, ಮಂಡ್ಯ ರಮೇಶ್‌ ಅವರ ನಾಟಕ ರಂಗ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಇನ್ನೂ ಎಲ್ಲವೂ ಅಂದುಕೊಂಡ ಹಾಗೇ ನಡೆಯುತ್ತಿದ್ದರೆ ಚಂದು, ಡೆವಿಲ್ ಸಿನಿಮಾದಲ್ಲಿ ಅಭಿನಯಿಸಬೇಕಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. 

ಇನ್ನು ತೆರೆ ಹಿಂದೆಯೂ ಚಂದು ಕೆಲಸ ಮಾಡಿದ್ದಾರೆಂಬ ಮಾಹಿತಿಯಿದೆ. 
ಮುಂದಿನ ದಿನಗಳಲ್ಲಿ ತೂಗುದೀಪ್ ಪ್ರೊಡಕ್ಷನ್ ಅಡಿಯಲ್ಲಿ ಚಂದು ಅವರನ್ನು ದೊಡ್ಡ ಮಟ್ಟದಲ್ಲಿ ಬೆಳ್ಳಿತೆರೆಗೆ ಪರಿಚಯಿಸುವ ಯೋಜನೆಯಿದೆ. 

ಈ ಮಧ್ಯೆ ಚಂದು ಇದೀಗ ಮೈಸೂರು ದಸರಾದಲ್ಲಿ ನೆಮ್ಮದಿ ಎಂಬ ಸ್ಟಾಲ್ ಓಪನ್ ಮಾಡಿರುವುದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಯಾವುದೇ ಕೆಲಸವಾದರೇನು ಅಚ್ಚುಕಟ್ಟಾಗಿ ಮಾಡಿ, ಬದುಕು ಕಟ್ಟಿಕೊಂಡರಾಯಿತು ಎಂದು ಕಮೆಂಟ್ ಮಾಡುತ್ತಿದ್ದಾರೆ. 

ಮಾವ ದರ್ಶನ್ ಮೇಲೆ ಚಂದುಗೆ ವಿಶೇಷವಾದ ಪ್ರೀತಿಯಿದ್ದು, ಜೈಲು ಸೇರಿದಾಗ ಪ್ರತಿ ವಾರ ಭೇಟಿಗೆ, ಮನೆ ನಿಭಾಯಿಸುವಲ್ಲಿ ದರ್ಶನ್‌ಗೆ ಬೆಂಬಲವಾಗಿ ನಿಂತಿದ್ದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ