ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ, ಪವಿತ್ರಾ ಸಹವಾಸ ಬಿಟ್ಟಿದ್ದಾರೆ, ತೀರಾ ಕುಗ್ಗಿಹೋಗಿದ್ದಾರೆ ಎಂದೆಲ್ಲಾ ಆಪ್ತರು ನೀಡುತ್ತಿದ್ದ ಹೇಳಿಕೆಗಳೆಲ್ಲಾಸುಳ್ಳು ಎಂದು ಈಗ ಬಯಲಾಗಿದೆ.
ದರ್ಶನ್ ಜೈಲಿನಲ್ಲಿ ವಿಐಪಿ ಆತಿಥ್ಯ ಸ್ವೀಕರಿಸುತ್ತಿರುವ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಇದೀಗ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ದರ್ಶನ್ ರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಸಿಎಂ ಆದೇಶ ನೀಡಿದ್ದಾರೆ.
ದರ್ಶನ್ ತಮ್ಮ ಪರಿಚಿತರೊಂದಿಗೆ ವಿಡಿಯೋ ಕಾಲ್ ಮಾಡಿರುವುದು, ಮೆತ್ತನೆಯ ಬೆಡ್ ನಲ್ಲಿ ಕೂತಿರುವುದು, ಸಿಗರೇಟು ಕಾಫಿ ಕಪ್ ಹಿಡಿದುಕೊಂಡು ಲಾನ್ ನಲ್ಲಿ ಕುಳಿತಿರುವ ಫೋಟೋ, ವಿಡಿಯೋಗಳು ವೈರಲ್ ಆಗಿರಿವುದು ಪತ್ನಿ ವಿಜಯಲಕ್ಷ್ಮಿ ಮುಜುಗರಕ್ಕೀಡಾಗುವಂತೆ ಮಾಡಿದೆ.
ಪ್ರತೀ ಸೋಮವಾರಗಳಂದು ಪತಿ ಭೇಟಿಗೆ ಬರುವ ವಿಜಯಲಕ್ಷ್ಮಿ ಇಂದು ಬಂದೇ ಇಲ್ಲ. ಜೈಲಿನ ಹೊರಗೇ ಮಾಧ್ಯಮಗಳು ಕಾಯುತ್ತಿರುವುದರಿಂದ ವಿಜಯಲಕ್ಷ್ಮಿ ಇಂದು ಜೈಲ್ ಗೆ ಭೇಟಿ ನೀಡಿಲ್ಲ. ಪತಿಯ ಬಿಡುಗಡೆಗಾಗಿ, ಒಳಿತಿಗಾಗಿ ವಿಜಯಲಕ್ಷ್ಮಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರೆ ಇತ್ತ ದರ್ಶನ್ ತಪ್ಪಿನ ಬಗ್ಗೆ ಕೊಂಚವೂ ಪಶ್ಚಾತ್ತಾಪವಿಲ್ಲದವರಂತೆ ಜೈಲಿನ ಕುಳಿತು ಮೋಜು-ಮಸ್ತಿ ಮಾಡುತ್ತಿರುವುದು ಸರಿಯೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.