ಪುತ್ರಿಗೆ ಬರ್ತ್‌ಡೇ ಸಂಭ್ರಮ: ಮುದ್ದಾದ ವಿಡಿಯೋ ಹಂಚಿಕೊಂಡು ಖುಷಿಪಟ್ಟ ಯಶ್‌–ರಾಧಿಕಾ

Sampriya

ಸೋಮವಾರ, 2 ಡಿಸೆಂಬರ್ 2024 (14:58 IST)
Photo Courtesy X
ಬೆಂಗಳೂರು: ರಾಕಿಂಗ್‌ ಸ್ಟಾರ್ ನಟ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರಿಗೆ ಇಂದು 6ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮಗಳು ಐರಾಳ ಮುದ್ದಾದ ವಿಡಿಯೋ ಹಂಚಿಕೊಂಡು ಯಶ್ ದಂಪತಿ ಸಂಭ್ರಮಿಸಿದ್ದಾರೆ.

ಅಕ್ಟೋಬರ್ 30ರಂದು ಯಶ್ ಹಾಗೂ ರಾಧಿಕಾ ಪುತ್ರ ಯಥರ್ವ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಈಗ ಮಗಳ ಹುಟ್ಟುಹಬ್ಬ ಸಂಭ್ರಮ.

ಚಿಕ್ಕ ಕಾಲ್ಬೆರಳುಗಳಿಂದ ಹಿಡಿದು ಚಿನ್ನದ ಹೃದಯದವರೆಗೆ, ಇದು ಶುದ್ಧ ಪ್ರೀತಿ, ಮತ್ತು ಸಂತೋಷ ಮತ್ತು ಕಿಡಿಗೇಡಿತನದ 6 ವರ್ಷಗಳು. ನಮ್ಮ ಐರಾಗೆ ಜನ್ಮ ದಿನದ ಶುಭಾಶಯಗಳು ಎಂದು ಯಶ್ ಮತ್ತು ರಾಧಿಕಾ ವಿಶೇಷವಾಗಿ ವಿಶ್ ಮಾಡಿದ್ದಾರೆ. ಐರಾಳ ತುಂಟತನದ ಚೆಂದದ ವಿಡಿಯೋ ಕೂಡ ಶೇರ್ ಮಾಡಿದ್ದಾರೆ.

ಇನ್ನೂ ಯಶ್ ಅವರು ಟಾಕ್ಸಿಕ್ ಸಿನಿಮಾದ ಚಿತ್ರೀಕರಣಕ್ಕಾಗಿ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ನಟನ ಕುಟುಂಬ ಕೂಡ ಯಶ್ ಜೊತೆ ಮುಂಬೈನಲ್ಲಿದ್ದಾರೆ. ಇಂದು ಮಗಳ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡಲಿದ್ದಾರೆ.

ಐರಾ ಅಥವಾ ಆಯ್ರಾ ಎಂಬ ಹೆಸರು ಬ್ರಿಟನ್ನಿನಲ್ಲಿ ಬಹಳ ಜನಪ್ರಿಯತೆ ಪಡೆದಿದೆ. ಅರೇಬಿಕ್‌ನಲ್ಲಿ ಐರಾ ಎಂದರೆ ಕಣ್ಣು ತೆರೆಸುವವರು ಅಥವಾ ಗೌರವಾನ್ವಿತರು ಎಂದರ್ಥ ಹಾಗೂ ಕನ್ನಡದಲ್ಲಿ ಭೂದೇವಿಯಲ್ಲಿ ಸನ್ನಿಹಿತಳಾದ ಲಕ್ಷ್ಮೀ ಎಂದರ್ಥ .


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ