ಪವಿತ್ರಾ ಗೌಡ ಅರೆಸ್ಟ್ ಮಾಡಲು ಬಂದ ಪೊಲೀಸರು: ಟೈಂ ಕೇಳಿದ ಪವಿತ್ರಾ
ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸುತ್ತಿದ್ದಂತೇ ಪೊಲೀಸರು ಸಿವಿಲ್ ಡ್ರೆಸ್ ನಲ್ಲಿ ಮನೆ ಮುಂದೆ ಪ್ರತ್ಯಕ್ಷರಾಗಿದ್ದರು. ಅತ್ತ ದರ್ಶನ್ ಮನೆಯ ಮುಂದೆಯೂ ಪೊಲೀಸರು ಜಮಾಯಿಸಿದ್ದರು. ಆದರೆ ದರ್ಶನ್ ಆರ್ ಆರ್ ನಗರ ಮನೆಯಲ್ಲಿರಲಿಲ್ಲ.
ಆದರೆ ಪವಿತ್ರಾ ಮನೆಯೊಳಗೇ ಇದ್ದರು. ಪವಿತ್ರಾ ಗೌಡರನ್ನು ಅರೆಸ್ಟ್ ಮಾಡಲು ಮಹಿಳಾ ಸಿಬ್ಬಂದಿಗಳೂ ಬಂದಿದ್ದಾರೆ. ಮನೆಯೊಳಗೆ ಹೋಗಿರುವ ಸಿಬ್ಬಂದಿಗಳು ಇನ್ನಷ್ಟೇ ಆಕೆಯನ್ನು ಹೊರಗೆ ಕರೆತರಬೇಕಿದೆ. ಮನೆಯಿಂದ ಹೊರಡುವ ಮುನ್ನ ಅಧಿಕಾರಿಗಳ ಬಳಿ ಪವಿತ್ರಾ ಕೊಂಚ ಸಮಯ ಕೇಳಿರುವ ಸಾಧ್ಯತೆಯಿದೆ. ಅಲ್ಲದೆ, ಪವಿತ್ರಾಗೆ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆಯಿದೆ. ಇದಾದ ಬಳಿಕ ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದು ನೇರವಾಗಿ ಜೈಲಿಗೆ ತೆರಳಲಾಗುತ್ತದೆ.