ಶೈನ್ ಶೆಟ್ಟಿ ಹಾದಿಯಲ್ಲಿ ದೀಪಿಕಾ ದಾಸ್: ಬಡವರ ಸಹಾಯಕ್ಕೆ ಹೊರಟು ನಿಂತ ಬಿಗ್ ಬಾಸ್ ಬೆಡಗಿ

ಶುಕ್ರವಾರ, 3 ಏಪ್ರಿಲ್ 2020 (09:33 IST)
ಬೆಂಗಳೂರು: ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ತಮ್ಮ ತಂಡದ ಜತೆಗೂಡಿ ಲಾಕ್ ಡೌನ್ ನಿಂದಾಗಿ ತೊಂದರೆಗೀಡಾದವರಿಗೆ ಆಹಾರ, ಅಗತ್ಯ ವಸ್ತು ಪೂರೈಸುತ್ತಿದ್ದಾರೆ. ಅವರದೇ ಹಾದಿಯಲ್ಲಿ ಈಗ ಬಿಗ್ ಬಾಸ್ ಸಹ ಸ್ಪರ್ಧಿ ದೀಪಿಕಾ ದಾಸ್ ಕೂಡಾ ನಡೆಯುತ್ತಿದ್ದಾರೆ.


ದೀಪಿಕಾ ಚ್ಯಾರಿಟಿಯೊಂದರ ಸದಸ್ಯರ ಸಹಾಯದೊಂದಿಗೆ ತಾವೇ ಸಹಾಯ ಮಾಡಲು ಫೀಲ್ಡಿಗಿಳಿದಿದ್ದು, ಸಂಕಷ್ಟಪೀಡಿತರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಲು ಹೊರಟಿದ್ದಾರೆ.

ಅಷ್ಟೇ ಅಲ್ಲದೆ, ನಮ್ಮ ಸಹಾಯಕ್ಕೆ ಕೈ ಜೋಡಿಸಿ ಎಂದು ಧನ ಸಹಾಯ ಕೇಳಿದ್ದಾರೆ. ಇದಕ್ಕಾಗಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬ್ಯಾಂಕ್ ಖಾತೆ ವಿವರವನ್ನೂ ನೀಡಿದ್ದಾರೆ. ನೀವು ನೀಡಿದ ದೇಣಿಗೆಯಲ್ಲಿ ನಾವೇ ಖುದ್ದಾಗಿ ಸಂಕಷ್ಟಕ್ಕೀಡಾದವರ ಬಳಿ ತೆರಳಿ ಅಗತ್ಯ ವಸ್ತುಗಳನ್ನು ತಲುಪಿಸಿ ಬರುತ್ತೇವೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ