ಸೀರಿಯಲ್ ಗಳು ಪ್ರಸಾರವಾಗಲ್ಲ: ಸೋಮವಾರದಿಂದ ಬಿಗ್ ಬಾಸ್ ಎಂಜಾಯ್ ಮಾಡಿ!

ಶುಕ್ರವಾರ, 3 ಏಪ್ರಿಲ್ 2020 (09:26 IST)
ಬೆಂಗಳೂರು: ಮಾರ್ಚ್ 19 ರಿಂದ ಧಾರವಾಹಿ ಶೂಟಿಂಗ್ ನಡೆದಿಲ್ಲ. ಹೀಗಾಗಿ ಈ ವಾರಕ್ಕೆ ಹೊಸ ಎಪಿಸೋಡ್ ಗಳ ಪ್ರಸಾರ ಮುಕ್ತಾಯವಾಗಲಿದೆ. ಇದರಿಂದಾಗಿ ಸೋಮವಾರದಿಂದ ಕಿರುತೆರೆಯಲ್ಲಿ ಧಾರವಾಹಿಗಳ ಸಮಯದಲ್ಲಿ ಏನು ಪ್ರಸಾರ ಮಾಡೋದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.


ಜೀ ಕನ್ನಡ, ಸುವರ್ಣ ವಾಹಿನಿ ಹಳೆ ಎಪಿಸೋಡ್ ಗಳನ್ನೇ ಪ್ರಸಾರ ಮಾಡಲು ನಿರ್ಧರಿಸಿದ್ದರೆ, ಕಲರ್ಸ್ ಕನ್ನಡ ವಾಹಿನಿ ಮಾತ್ರ ತನ್ನಜನಪ್ರಿಯ ಬಿಗ್ ಬಾಸ್ ಏಳನೇ ಆವೃತ್ತಿಯ ಎಪಿಸೋಡ್ ಗಳನ್ನು ಮತ್ತೆ ಪ್ರಸಾರ ಮಾಡಲಿದೆ.

ಸೋಮವಾರದಿಂದ ಅಂದರೆ ಏಪ್ರಿಲ್ 6 ರಿಂದ ಬಿಗ್ ಬಾಸ್ ಪ್ರಸಾರವಾಗಲಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಬಿಗ್ ಬಾಸ್ ಶೋವನ್ನ ಮತ್ತೆ ಟಿವಿಯಲ್ಲಿ ನೋಡಿ ಎಂಜಾಯ್ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ