ಚಂದನವನದಲ್ಲಿ ಹೊಸ ಭರವಸೆಯಲ್ಲಿ ದೇವರಾಜ್ ಕಿರಿಯ ಪುತ್ರ ಪ್ರಣಂ

Sampriya

ಬುಧವಾರ, 10 ಜುಲೈ 2024 (16:40 IST)
Photo Courtesy X
ದೇವರಾಜ್ ಕಿರಿಯ ಮಗ, ಪ್ರಜ್ವಲ್ ದೇವರಾಜ್ ಸಹೋದರ ಪ್ರಣಂ ದೇವರಾಜ್ ನಟನೆಯ 'ಸನ್ ಆಫ್ ಮುತ್ತಣ್ಣ'  ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಇದರ ಕುಂಬಳಕಾಯಿ ಹೊಡೆಯುವ ಶಾಸ್ತ್ರ ಈಚೆಗೆ ಸಿನಿಮಾ ಸೆಟ್ಟೇರಿದ ಜಾಗವಾದ ಬೆಂಗಳೂರಿನ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ನಡೆಯಿತು.  ಇದರಲ್ಲಿ ಚಿತ್ರ ತಂಡದವರು ಭಾಗವಾಗಿದ್ದರು.

ನಂತರ ಮಾತನಾಡಿದ ಪ್ರಣಂ ದೇವರಾಜ್ ಸಿನಿಮಾ ಶೂಟಿಂಗ್ ಮುಗಿದಿದ್ದಕ್ಕೆ ಖುಷಿಯೂ ಇದೆ, ಅದರ ಜತೆಗೆ ಚಿತ್ರತಂಡವನ್ನು ಮಿಸ್‌ ಮಾಡಿಕೊಳ್ಳುತ್ತೇವೆಂಬ ಬೇಜಾರು ಇದೆ. ಸಿನಿಮಾದ ಶೂಟಿಂಗ್ ಚೆನ್ನಾಗಿ ನಡೆದಿದ್ದು, ತಂದೆ ಮಗನ ಬಾಂಧವ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ನಟ ರಘು ಅವರು ನನಗೆ ಸೆಟ್‌ನಲ್ಲಿ ತಂದೆ ಥರ ಇದ್ದರು. ಈ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಪುರಾತನ ಫಿಲ್ಮಂಸ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಇನ್ನೂ ಈ ಸಿನಿಮಾದಲ್ಲಿ ಪ್ರಣಂಗೆ ನಾಯಕಿಯಾಗಿ ಖುಷಿ ರವಿ ಅವರು ಅಭಿನಿಯಿಸಿದ್ದಾರೆ. ಚಿತ್ರಕ್ಕೆ ಸಚಿನ್ ಬಸ್ರೂರ್ ಅದ್ಭುತವಾಗಿರುವ ಹಾಡನ್ನು ಕಂಪೋಸ್ ಮಾಡಿದ್ದಾರೆ. ಧನು ಮಾಸ್ಟರ್ ಅವರು ಕೋರಿಯೋಗ್ರಫಿ ಮಾಡಿದ್ದು, ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು.  

ಚಿತ್ರಕ್ಕೆ ಶ್ರೀಕಾಂತ್ ಹುಣ್ಯೂರ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ.  ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಸೇರಿದಂತೆ ದೊಡ್ಡ ತಾರಾಬಳಗವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ