ನಟ ಧ್ರುವ ಸರ್ಜಾ ನಿರ್ಮಾಕಪರಿಗೆ ಪಂಗನಾಮ ಹಾಕಿದ್ರಾ, ಇದೆಂಥಾ ಆರೋಪ

Krishnaveni K

ಶನಿವಾರ, 9 ಆಗಸ್ಟ್ 2025 (12:16 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಿರ್ದೇಶಕರಿಗೇ ಕೋಟಿ ಹಣ ವಂಚನೆ ಮಾಡಿದ ಆರೋಪ ಕೇಳಿಬಂದಿದ್ದು ಎಫ್ಐಆರ್ ದಾಖಲಾಗಿದೆ. ಕೆಡಿ ಸಿನಿಮಾ ಬಿಡುಗಡೆ ಹೊಸ್ತಿಲಲ್ಲೇ ಇಂತಹದ್ದೊಂದು ಆರೋಪ ಕೇಳಿಬಂದಿದೆ.

ಜಗ್ಗು ದಾದ ಚಿತ್ರದ ನಿರ್ಮಾಪಕ ರಾಘವೇಂದ್ರ ಹೆಗ್ಡೆ ಎಂಬವರು ಧ್ರುವ ಸರ್ಜಾ ವಿರುದ್ಧ ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ. ಸಿನಿಮಾ ಮಾಡುವುದಾಗಿ 2019 ರಲ್ಲಿ ಧ್ರುವ ಸರ್ಜಾಗೆ ನಿರ್ಮಾಪಕರು 3 ಕೋಟಿ ರೂಪಾಯಿ ಹಣ ನೀಡಿದ್ದರು. ಆದರೆ ಇದೀಗ ಧ್ರುವ ಚಿತ್ರ ಮಾಡಲ್ಲ ಎಂದಿದ್ದಾರೆ. ಆದರೆ ಹಣವನ್ನೂ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ನನಗೆ ಧ್ರುವ ವಂಚನೆ ಮಾಡಿದ್ದಾರೆ ಎಂದು ರಾಘವೇಂದ್ರ ಹೆಗ್ಡೆ ಮುಂಬೈನ  ಅಂಬೋಲಿಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರ ಸಂಬಂಧ ಎಫ್ಐಆರ್ ಕೂಡಾ ದಾಖಲಾಗಿದೆ.  ದಿ ಸೋಲ್ಜರ್ ಎನ್ನುವ ಹೆಸರಿನಲ್ಲಿ ಸಿನಿಮಾ ಮಾಡಲು ಎಲ್ಲಾ ತಯಾರಿ ನಡೆದಿತ್ತು. ಆದರೆ ಬಳಿಕ ಅವರು ಆಸಕ್ತಿ ತೋರಲಿಲ್ಲ.

ಸಿನಿಮಾ ಕಾಂಟ್ರ್ಯಾಕ್ಟ್ ಗೆ ಸಹಿ ಹಾಕುವ ಮೊದಲು 3 ಕೋಟಿ ರೂ. ಕೇಳಿದ್ದರು. ಆದರೆ ಕೊನೆಗೆ ಸಿನಿಮಾವೂ ಆಗಲಿಲಲ್ಲ, ಹಣವನ್ನೂ ನೀಡಲಿಲ್ಲ. ಇದೀಗ ಬಡ್ಡಿ ಸೇರಿ ಹಣದ ಮೊತ್ತ ಸುಮಾರು 9 ಕೋಟಿ ರೂ.ಗಳಷ್ಟಾಗಿದೆ ಎಂದು ರಾಘವೇಂದ್ರ ದೂರಿನಲ್ಲಿ ಹೇಳಿದ್ದಾರೆ.

ಕೇವಲ ತಮ್ಮ ಸಂಭಾವನೆ ಮಾತ್ರವಲ್ಲ, ಸ್ಕ್ರಿಪ್ಟ್ ರೈಟರ್ ಗಳಿಗೂ ಹಣ ಕೊಡಿಸಿದ್ದರು. ಇದೀಗ ಯೋಜನೆ ಬಗ್ಗೆ ಮಾತನಾಡಲು ಪ್ರಯತ್ನಿಸಿದರೂ ಕರೆ ಕೂಡಾ ಸ್ವೀಕರಿಸುತ್ತಿಲ್ಲ. ಬಡ್ಡಿ ಎಲ್ಲಾ ಸೇರಿ ನನಗೆ 9.58 ಕೋಟಿ ರೂ. ಬರಬೇಕಿದೆ ಎಂದು ರಾಘವೇಂದ್ರ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ