ಮುಂದಿನ ಸಿನಿಮಾ ಬಗ್ಗೆ ಅಪ್ ಡೇಟ್ ಗೆ ಕಾದಿದ್ದರೆ ಪತ್ನಿಯ ಬಗ್ಗೆ ಹೊಸ ಸುದ್ದಿ ಕೊಟ್ಟ ಕಿಚ್ಚ ಸುದೀಪ್

ಬುಧವಾರ, 14 ಜೂನ್ 2023 (16:42 IST)
ಬೆಂಗಳೂರು: ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಜೂನ್ ಮೊದಲ ವಾರದಲ್ಲಿ ಅಪ್ ಡೇಟ್ ಸಿಗಬಹುದು ಎಂದು ಕಾಯುತ್ತಿದ್ದವರಿಗೆ ಸುದೀಪ್ ಈಗ ಎರಡು ಹೊಸ ಸುದ್ದಿ ಕೊಟ್ಟಿದ್ದಾರೆ.

ಮೊದಲನೆಯದಾಗಿ ಅವರ ಅಳಿಯ ಸಂಚಿತ್ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಬಗ್ಗೆ. ಇನ್ನೊಂದು ತಮ್ಮ ಪತ್ನಿ ಪ್ರಿಯಾ ಸುದೀಪ್ ಬಗ್ಗೆ ಹೊಸ ಸುದ್ದಿ ಕೊಟ್ಟಿದ್ದಾರೆ.

ಸುದೀಪ್ ಪತ್ನಿ ಪ್ರಿಯಾ ಇದೀಗ ನಿರ್ಮಾಣ ರಂಗಕ್ಕಿಳದಿದ್ದಾರೆ. ಸುದೀಪ್ ಮತ್ತು ಪ್ರಿಯಾ ಹಾಗೂಮ ಮಗಳು ಸಾನ್ವಿ ಹೆಸರನ್ನು ಜೋಡಿಸಿ ಸುಪ್ರಿಯಾನ್ವಿ ಪಿಕ್ಚರ್ಸ್ ಸ್ಟುಡಿಯೋ ಎನ್ನುವ ಹೊಸ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದು, ಸ್ಯಾಂಡಲ್ ವುಡ್ ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಇದುವರೆಗೆ ಪ್ರಿಯಾ ಗಂಡನ ಸಿನಿಮಾಗಳಿಗೆ ಬೆನ್ನುಲುಬಾಗಿದ್ದರು. ಆದರೆ ಇದೀಗ ಸ್ವತಃ ನಿರ್ಮಾಪಕಿಯಾಗಿ ರಂಗ ಪ್ರವೇಶ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ