ರಾಜ್ ಬಿ ಶೆಟ್ಟಿ ಬಳಿಕ ರಕ್ಷಿತ್ ಶೆಟ್ಟಿ ಕಡೆಯಿಂದ ಬಂಪರ್ ಸುದ್ದಿ

ಗುರುವಾರ, 15 ಜೂನ್ 2023 (08:10 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಎಂದರೆ ತ್ರಿಬಲ್ ಆರ್ ಎಂದೇ ಫೇಮಸ್. ಈ ಮೂವರ ಸಿನಿಮಾವನ್ನು ಎದಿರು ನೋಡುವ ಪ್ರತ್ಯೇಕ ಪ್ರೇಕ್ಷಕ ವರ್ಗವೇ ಇದೆ.

ಮೊನ್ನೆಯಷ್ಟೇ ರಾಜ್ ಬಿ ಶೆಟ್ಟಿ ತಮ್ಮ ಮುಂದಿನ ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಿದ್ದರು. ಇದೀಗ ರಕ್ಷಿತ್ ಶೆಟ್ಟಿ ಸರದಿ. ಸಿಂಪಲ್ ಸ್ಟಾರ್ ನಾಯಕರಾಗಿರುವ 777 ಚಾರ್ಲಿ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಅದಾದ ಬಳಿಕ ಅವರ ಮತ್ತೊಂದು ಸಿನಿಮಾ ಈ ವರ್ಷ ತೆರೆ ಕಾಣಲಿದೆ. ಅದು ಸಪ್ತಸಾಗರದಾಚೆ ಎಲ್ಲೊ ಎಂಬ ವಿಭಿನ್ನ ಪ್ರೇಮಕತೆ.

ಈ ಸಿನಿಮಾ ಎರಡು ಪಾರ್ಟ್ ಗಳಲ್ಲಿ ರಿಲೀಸ್ ಆಗಲಿದೆ ಎಂದು ರಕ್ಷಿತ್ ಇತ್ತೀಚೆಗೆ ಹೇಳಿದ್ದರು. ಅದರಂತೆ ಇಂದು ಎರಡೂ ಪಾರ್ಟ್ ರಿಲೀಸ್ ಯಾವಾಗ ಎಂದು ದಿನಾಂಕ ಘೋಷಣೆ ಮಾಡಲಿದ್ದಾರೆ.  ಮೊದಲನೇ ಭಾಗದಲ್ಲಿ ರಕ್ಷಿತ್ ಲವ್ವರ್ ಬಾಯ್ ಲುಕ್ ನಲ್ಲಿದ್ದರೆ, ಎರಡನೇ ಪಾರ್ಟ್ ನಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ