ವಿಶೇಷ ದಿನದಂದು ಮಗಳಿಗೆ ನಾಮಕರಣ ಮಾಡಲು ತೀರ್ಮಾನಿಸಿದ ಧ್ರುವ ಸರ್ಜಾ
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಿದೆ. ಇದೇ ವಿಶೇಷ ದಿನದಂದೇ ಧ‍್ರುವ ತಮ್ಮ ಮಗಳ ನಾಮಕರಣ ಶಾಸ್ತ್ರ ಮಾಡಲು ತೀರ್ಮಾನಿಸಿದ್ದಾರೆ.
ಸರ್ಜಾ ಕುಟುಂಬದವರು ರಾಮನ ಬಂಟ ಆಂಜನೇಯ ಸ್ವಾಮಿಯ ಭಕ್ತರು. ಏನೇ ಮಾತನಾಡುವುದಿದ್ದರೂ ಕೊನೆಯಲ್ಲಿ ಜೈ ಆಂಜನೇಯ ಎಂದೇ ಸರ್ಜಾ ಕುಟುಂಬ ಮಾತು ಮುಗಿಸುತ್ತದೆ. ಅವರ ಸಿನಿಮಾಗಳಲ್ಲೂ ಆಂಜನೇಯನ ಕುರಿತಾದ ಹಾಡು ಇರುತ್ತದೆ.
ಇದೀಗ ಇಡೀ ವಿಶ್ವವೇ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ಉದ್ಘಾಟನೆಯಾಗುವ ದಿನಾಂಕಕ್ಕಾಗಿ ಕಾಯುತ್ತಿದೆ. ಆ ದಿನವೇ ಮಗಳಿಗೆ ನಾಮಕರಣ ಮಾಡಿ ಸ್ಮರಣೀಯವಾಗಿಸಲು ಧ್ರುವ ಸರ್ಜಾ ಕುಟುಂಬ ತೀರ್ಮಾನಿಸಿದೆಯಂತೆ.