ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಬರ್ತ್ ಡೇ : ಬಾಲಿವುಡ್ ನಟ, ನಟಿಯರಿಂದ ಸ್ಪೇಷಲ್ ವಿಶ್
ಶನಿವಾರ, 10 ಅಕ್ಟೋಬರ್ 2020 (13:33 IST)
ಬಾಲಿವುಡ್ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಡುತ್ತಿರುವ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ತಮ್ಮ ಜನ್ಮದಿನದ ಆಚರಣೆ ಮೂಡ್ ನಲ್ಲಿದ್ದಾರೆ.
ಎಸ್‌ಎಸ್ ರಾಜಮೌಳಿ ಅವರ ಆರ್ ಆರ್ ಆರ್ ನಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವ್‌ಗನ್, ಶ್ರಿಯಾ ಸರನ್ ಮತ್ತು ಒಲಿವಿಯಾ ಮೋರಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಬಾಹುಬಲಿ ಫ್ರ್ಯಾಂಚೈಸ್, ಮಗಧೀರ, ಈಗಾ ಮತ್ತು ಇನ್ನಿತರ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ ಎಸ್.ಎಸ್.ರಾಜಮೌಳಿ.
ಜನಪ್ರಿಯ ಚಲನಚಿತ್ರ ನಿರ್ಮಾಪಕ ಎಸ್.ಎಸ್.ರಾಜಮೌಳಿ ಅವರು ತಮ್ಮ 47 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಖ್ಯಾತನಾಮರಾದ ಅಜಯ್ ದೇವ್‌ಗನ್, ಜೂನಿಯರ್ ಎನ್‌ಟಿಆರ್, ಆಲಿಯಾ ಭಟ್, ರಾಣಾ ದಗ್ಗುಬಾಟಿ ಮತ್ತು ಇತರರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬ್ಲಾಕ್‌ಬಸ್ಟರ್ ನಿರ್ದೇಶಕರಿಗೆ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ.