ಕೆರಾಡಿಗೆ ಬಂದ ರಾಣಾ ದಗ್ಗುಬಾಟಿಗೆ ಕನ್ನಡ ಕಲಿಸಿದ ಡಿವೈನ್ ಸ್ಟಾರ್ ರಿಷಭ್‌ ಶೆಟ್ಟಿ

Sampriya

ಶುಕ್ರವಾರ, 20 ಡಿಸೆಂಬರ್ 2024 (14:52 IST)
Photo Courtesy X
ಬೆಂಗಳೂರು: ಡಿವೈನ್ ಸ್ಟಾರ್ ರಿಷಭ್‌ ಶೆಟ್ಟಿ ಅವರು ಕಾಂತಾರ ಚಾಪ್ಟರ್ 1 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕುಂದಾಪುರದ ಕೆರಾಡಿಗೆ ಬಂದ ತೆಲುಗು ನಟ ರಾಣಾ ದಗ್ಗುಬಾಟಿಗೆ ರಿಷಭ್‌ ಶೆಟ್ಟಿ ಕನ್ನಡ ಕಲಿಸಿದ್ದಾರೆ.

ಇದೇ ವೇಳೆ ದಗ್ಗುಬಾಟಿ ಅವರು ರಿಷಭ್‌ ಬಳಿ ರಾಜ್‌ಕುಮಾರ್ ಸಿನಿಮಾ ಡೈಲಾಗ್ ಕೂಡ ಕಲಿತಿದ್ದಾರೆ.  ಒಟಿಟಿಗಾಗಿ ದಿ ರಾಣಾ ದಗ್ಗುಬಾಟಿ ಶೋ ಎಂಬ ಹೆಸರನ್ನೇ ಇದಕ್ಕೆ ಇಟ್ಟಿದ್ದಾರೆ. ರಿಷಬ್‌ರನ್ನು ಸಂದರ್ಶನ ಮಾಡಲು ಕುಂದಾಪುರದ ಕೆರಾಡಿಗೆ ಭೇಟಿ ಕೊಟ್ಟಿರೋದು ವಿಶೇಷ.

ಇವರೊಂದಿಗೆ ಕುಡ್ಲದ ಬೆಡಗಿ ನೇಹಾ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಇನ್ನೂ ಸಿನಿಮಾ ಮಾಡಬೇಕು ಎಂದರೆ ನಗರಕ್ಕೆ ಬರಬೇಕು ಎಂಬುದನ್ನು ಅವರು ಸುಳ್ಳು ಮಾಡಿದ್ದಾರೆ. ಕುಂದಾಪುರದಲ್ಲಿ ಕಾಂತಾರ ಚಾಪ್ಟರ್ 1 ಶೂಟಿಂಗ್ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೆರಾಡಿಯ ಸರ್ಕಾರಿ ಶಾಲೆಗೆ ತೆರಳಿ ಕನ್ನಡ ಕಲಿಯುವ ಪ್ರಯತ್ನ ಮಾಡಿದ್ದಾರೆ. ರಾಜ್‌ಕುಮಾರ್ ಅವರ ಹೇಳು ಪಾರ್ಥ ಡೈಲಾಗ್ ಅನ್ನು ರಾಣಾಗೆ ರಿಷಭ್‌ ಹೇಳಿ ಕೊಟ್ಟಿದ್ದಾರೆ. ಇದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಕಲಿಯುವ ಆಸಕ್ತಿ ತೋರಿದ ರಾಣಾ ನಡೆಯನ್ನು ಅಭಿಮಾನಿಗಳು ಮೆಚ್ಚಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ