ಚ್ಯೂಯಿಂಗ್ ಗಮ್ ಜಗಿಯುವುದರಿಂದ ದೇಹದ ತೂಕ ಇಳಿಯುತ್ತದೆಯಂತೆ ಹೇಗೆ ಗೊತ್ತೇ?

ಶುಕ್ರವಾರ, 27 ಜುಲೈ 2018 (06:58 IST)
ಬೆಂಗಳೂರು : ಕೆಲವರು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಚ್ಯೂಯಿಂಗ್ ಗಮ್ ಜಗಿಯುತ್ತಾರೆ. ಇನ್ನು ಕೆಲವರು ಟೈಪಾಸ್ ಗಾಗಿ ಇದನ್ನು ತಿನ್ನತ್ತಾರೆ. ಆದರೆ ಇದು ನಮ್ಮ ದೇಹದ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆಯೇ ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.


 ಯಾವುದೇ ಮಿತ, ಹಿತ ಆಹಾರ ಮತ್ತು ವ್ಯಾಯಾಮವಿಲ್ಲದೆ ಕೇವಲ ಚ್ಯೂಯಿಂಗ್ ಗಮ್ ಮೆಲ್ಲುವುದರಿಂದ ಕೊಬ್ಬು ಕರಗಿಸಬಹುದೆಂದು ನೀವು ಅಂದುಕೊಂಡರೆ ಅದು ತಪ್ಪು. ಆದರೆ ಇದರಿಂದ ಸ್ವಲ್ಪ ಮಟ್ಟಿಗೆ ಸಹಾಯ ಮಾಡುವುದಂತೂ ಸತ್ಯ.
ಅದು ಹೇಗೆಂದರೆ ನೀವು ನಿರಂತರವಾಗಿ ಚ್ಯೂಯಿಂಗ್ ಗಮ್ ಮೆಲ್ಲುವುದರಿಂದ ನಿಮಗೆ ಬೇರೆ ಏನಾದರೂ ತಿನ್ನಬೇಕೆನಿಸುವುದಿಲ್ಲ. ಅಂದ್ರೆ ಇದು ನಿಮ್ಮ ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ಪದೇ ಪದೇ ತಿನ್ನಬೇಕೆನಿಸುವ ಬಾಯಿ ಚಪಲಕ್ಕೆ ಕಡಿವಾಣ ಹಾಕುತ್ತದೆ. ನಿಮ್ಮ ದೇಹ ನಿಜವಾಗಲೂ ಆಹಾರ ಬಯಸಿದಾಗ ಮಾತ್ರ ತಿನ್ನುವಂತೆ ಮಾಡುತ್ತದೆ.


ಆದರೆ ಮಿತಿಮೀರಿದರೆ ಅಮೃತವೂ ವಿಷವಂತೆ. ಇದು ನಿಮ್ಮ ಹಸಿವನ್ನು ನಿಯಂತ್ರಣದಲ್ಲಿಡುವು ದೇನೋ  ಸರಿ ಆದರೆ ಮಿತಿಮೀರಿ ಸೇವಿಸಿದರೆ ಅಪಾಯ ತಪ್ಪಿದ್ದಲ್ಲ. ಇದರಲ್ಲಿರುವ ಸೋರ್ಬಿಟೋಲ್ (sorbitol) (ಶುಗರ್ ಆಲ್ಕೋಹಾಲ್) ಭೇದಿ ಮತ್ತು ದೇಹದಲ್ಲಿ ನೋವನ್ನು ಉಂಟು ಮಾಡಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ