ಕನ್ನಡದ ಈ ಸಿನಿಮಾದಲ್ಲಿ ನಟಿ ವಿಜಯ ಲಕ್ಷ್ಮೀ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಗೊತ್ತೇ?
ಬುಧವಾರ, 18 ಜುಲೈ 2018 (07:30 IST)
ಬೆಂಗಳೂರು : ಇತ್ತೀಚೆಗಷ್ಟೇ ಚಾನಲ್ ವೊಂದರಲ್ಲಿ ತಮಗೆ ಕನ್ನಡದ ಚಿತ್ರರಂಗದಲ್ಲಿ ಅವಕಾಶ ಕೊಡುತ್ತಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದ ನಟಿ ವಿಜಯ ಲಕ್ಷ್ಮೀ ಅವರಿಗೆ ಇದೀಗ ಚಿತ್ರತಂಡವೊಂದು ತಮ್ಮ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ನೀಡಿದೆ ಎಂಬುದಾಗಿ ತಿಳಿದುಬಂದಿದೆ.
ಹೌದು. ಸೋಮಶೇಖರ್ ಅವರು ನಿರ್ಮಿಸುತ್ತಿರುವ 'ಫೈಟರ್' ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರು ನಾಯಕ ನಟನಾಗಿ ಅಭಿನಯಿಸುತ್ತಿದ್ದು, ವಿನೋದ್‍ಪ್ರಭಾಕರ್ ಅವರ ತಾಯಿಯಾಗಿ ನಟಿಸುವ ಅವಕಾಶ ನಟಿ ವಿಜಯ ಲಕ್ಷ್ಮೀ ಅವರಿಗೆ ಸಿಕ್ಕಿದೆ. ಈ ಚಿತ್ರದಲ್ಲಿ ಅವರು ದಕ್ಷ ಜಿಲ್ಲಾಧಿಕಾರಿಯಾಗಿ ನಟಿಸುತ್ತಿದ್ದಾರಂತೆ.
ಆಗಸ್ಟ್ 6ರಿಂದ ವಿಜಯಲಕ್ಷ್ಮೀ ಅವರ ಭಾಗದ ಚಿತ್ರೀಕರಣ ನಡೆಯಲಿದೆಯಂತೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ. ರಾಕೇಶ್ ಮತ್ತು ಶೇಖರ್ ಚಂದ್ರು ಅವರು ಛಾಯಾಗ್ರಹಣ ಮಾಡುತ್ತಿದ್ದು, ನೂತನ್ ಉಮೇಶ್ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರೊಂದಿಗೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ