ಈ ಆಹಾರಗಳಲ್ಲಿ ನಿಮ್ಮ ಮೂಳೆಗಳನ್ನು ಗಟ್ಟಿಯಾಗಿರುವ ಕ್ಯಾಲ್ಸಿಯಂ ಹಾಗೂ ವಿಟಮಿನ್‌ ಡಿ ಸಮೃದ್ಧವಾಗಿರುತ್ತದೆ

ಬುಧವಾರ, 18 ಜುಲೈ 2018 (07:12 IST)
ಬೆಂಗಳೂರು : ಸಾಮಾನ್ಯವಾಗಿ ಕ್ಯಾಲ್ಸಿಯಂ ಖನಿಜ ದೇಹಕ್ಕೆ ಬೇಕೆ ಬೇಕು. ಇದು ಮೂಳೆಗಳನ್ನು ದೃಢವಾಗಿ ಇಡುತ್ತದೆ. ವಯಸ್ಸಾದಂತೆ ಮೂಳೆಗಳ ಸವೆತ ಉಂಟಾಗುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಅಧಿಕ. ಸಾಮಾನ್ಯವಾಗಿ ಮೂಳೆ ಸವೆತ ಕ್ಯಾಲ್ಸಿಯಂ ಹಾಗೂ ವಿಟಮಿನ್‌ ಡಿ ಕೊರತೆಯಿಂದ ಉಂಟಾಗುತ್ತದೆ. ಅದಕ್ಕಾಗಿ ಪ್ರತಿದಿನ ತಿನ್ನವ ಆಹಾರದಲ್ಲಿ ಕ್ಯಾಲ್ಸಿಯಂ ಹಾಗೂ ವಿಟಮಿನ್‌ ಡಿ ಅಧಿಕವಿರುವ ಆಹಾರಗಳನ್ನು ತೆಗೆದುಕೊಂಡರೆ ಉತ್ತಮ.


ಇವುಗಳು  ಯಾವ ಆಹಾರಗಳಲ್ಲಿ ಹೆಚ್ಚಾಗಿ ಇರುತ್ತವೆ ಎಂಬುದನ್ನು ತಿಳಿಯೋಣ
ಕ್ಯಾಲ್ಸಿಯಂ ಅಧಿಕವಿರುವ ಆಹಾರಗಳು :
ಹಾಲು, ಹಾಲಿನ ಉತ್ಪನ್ನಗಳು, ಸೊಪ್ಪು, ಎಲೆಕೋಸು, ಬೆಂಡೆಕಾಯಿ, ಬ್ರೊಕೋಲಿ, ಸೋಯಾ ಉತ್ಪನ್ನಗಳು, ನಟ್ಸ್‌, ಮೀನು, ಬೀನ್ಸ್

ವಿಟಮಿನ್ ಡಿ ಅಧಿಕವಿರುವ ಆಹಾರಗಳು :

ಅಣಬೆ, ಮೊಟ್ಟೆ, ಮೀನು, ಧಾನ್ಯಗಳು, ವಿಟಮಿನ್‌ ಡಿ ಕೊರತೆ ಉಂಟಾಗದಿರಲು ಬೆಳಗ್ಗೆ 5-10 ನಿಮಿಷ ಬಿಸಿಲಿನಲ್ಲಿ ನಿಲ್ಲಿ(ಬೆಳಗ್ಗೆ 8 ಗಂಟೆಯೊಳಗೆ ನಿಲ್ಲಿ).


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ