ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ? ಸ್ಪಷ್ಟನೆ ಕೊಟ್ಟ ಧನಂಜಯ್

ಬುಧವಾರ, 26 ಅಕ್ಟೋಬರ್ 2022 (09:10 IST)
ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂಬ ಅಪವಾದ ಕೇಳಿಬಂದಿತ್ತು. ಅದಕ್ಕೀಗ ಡಾಲಿ ಧನಂಜಯ್ ಸ್ಪಷ್ಟನೆ ನೀಡಿದ್ದರು.

ವೀರಗಾಸೆ ವೇಷ ಹಾಕಿಕೊಂಡವರ ಮೇಲೆ ಡಾನ್ ಜಯರಾಜ್ ಪಾತ್ರಧಾರಿ ಹೊಡೆಯುವ ದೃಶ್ಯವಿದ್ದು, ಇದು ಈ ಕಲೆಗೆ ಮಾಡಿದ ಅವಮಾನ ಎಂದು ಆರೋಪ ಕೇಳಿಬಂದಿತ್ತು.

ಇದಕ್ಕೆ ಈಗ ಸ್ಪಷ್ಟನೆ ನೀಡಿರುವ ಧನಂಜಯ್ ‘ವೀರಗಾಸೆ ಮಾಡುವವರು ಚಪ್ಪಲಿ ಧರಿಸುವುದಿಲ್ಲ. ಆದರೆ ಇದರಲ್ಲಿ ವೀರಗಾಸೆ ವೇಷ ಹಾಕಿದವರು ಚಪ್ಪಲಿ ಹಾಕಿಕೊಂಡಿದ್ದರು. ಇದನ್ನು ನೋಡಿ ಅವರು ವೀರಗಾಸೆಯವರಲ್ಲ ಎಂದು ತಿಳಿದು ಜಯರಾಜ್ ಹೊಡೆಯುತ್ತಾನೆ. ವೀರಗಾಸೆಗೆ ಅವಮಾನ ಮಾಡಿದವರಿಗೆ ಜಯರಾಜ್ ಹೊಡೆಯುತ್ತಾನೆ ಹೊರತು ವೀರಗಾಸೆಗೆ ಅವಮಾನ ಮಾಡಿಲ್ಲ’ ಎಂದು ಧನಂಜಯ್ ಸ್ಪಷ್ಟನೆ ನೀಡಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ