ಸಿನಿಮಾಗೆ ಬ್ರೇಕ್‌ ನೀಡಿ ಮದುವೆ ತಯಾರಿಯಲ್ಲಿ ಬ್ಯುಸಿಯಾದ ಡಾಲಿ ಧನಂಜಯ್: ರಾಜ್ಯಪಾಲರಿಗೆ ಆಹ್ವಾನ

Sampriya

ಗುರುವಾರ, 9 ಜನವರಿ 2025 (19:59 IST)
Photo Courtesy X
ಬೆಂಗಳೂರು: ನಟ ಡಾಲಿ ಧನಂಜಯ್ ಸದ್ಯ ಸಿನಿಮಾ ಶೂಟಿಂಗ್ ಬ್ರೇಕ್ ನೀಡಿ ತಮ್ಮ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ರಾಜ್ಯದ ಸಿಎಂ, ಡಿಸಿಎಂ, ಸಿನಿಮಾ ರಂಗದ ಖ್ಯಾತ ನಟ ನಟಿಯರಿಗೆ ಆಮಂತ್ರಣ ನೀಡಿ ಆಹ್ವಾನಿಸಿದ್ದಾರೆ.  

ಸ್ಯಾಂಡಲ್‌ವುಡ್ ನಟ ಡಾಲಿ ಫೆ.16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮದುವೆ ಪತ್ರಿಕೆಯನ್ನು ನೀಡಿದ್ದಾರೆ.

ಇನ್ನೂ ಡಾಕ್ಟರ್ ಧನ್ಯತಾ ಜೊತೆ ಡಾಲಿ ಮೈಸೂರಿನಲ್ಲಿ ಹಸೆಮಣೆ ಏರಲಿದ್ದಾರೆ. ಫೆ.16ರಂದು ನಡೆಯಲಿರುವ ಈ ಮದುವೆಗೆ ರಾಜಕೀಯ ಗಣ್ಯರು, ಸಿನಿಮಾ ತಾರೆಯರು ಭಾಗಿಯಾಲಿದ್ದಾರೆ.

ಇನ್ನೂ ಅಣ್ಣ ಫ್ರಮ್ ಮೆಕ್ಸಿಕೋ, ನಾಡಪ್ರಭು ಕೆಂಪೇಗೌಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಹೊಸಬರ ಸಿನಿಮಾಗಳಿಗೆ ತಮ್ಮ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಕೂಡ ಮಾಡುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ