ಡ್ರಗ್ ಲಿಂಕ್ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮೊಬೈಲ್ ನಲ್ಲಿ ಏನೇನಿದೆ?

ಶನಿವಾರ, 26 ಸೆಪ್ಟಂಬರ್ 2020 (18:55 IST)
ಬಾಲಿವುಡ್ ಡ್ರಗ್ ಲಿಂಕ್ ನಲ್ಲಿ ವಾಟ್ಸಪ್ ಚಾಟ್ ವೈರಲ್ ಆಗಿರುವ ಹಿನ್ನೆಲೆಯಲ್ಲಿ ನಟಿ ದೀಪಿಕಾ ಪಡುಕೋಣೆ ವಿಚಾರಣೆ ಎದುರಿಸಿದ್ದಾರೆ.

ಮುಂಬೈನಲ್ಲಿ ಎನ್ ಸಿ ಬಿ ಅಧಿಕಾರಿಗಳು ನಟಿ ದೀಪಿಕಾರನ್ನು ಐದಾರು ಗಂಟೆ ವಿಚಾರಣೆ ನಡೆಸಿ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ.

ನಟಿ ದೀಪಿಕಾ ಪಡುಕೋಣೆಗೆ ಕೇಳಲಾದ ಪ್ರಶ್ನೆಗಳಲ್ಲಿ ಕೆಲವಕ್ಕೆ ನಟಿ ಸಮರ್ಪಕವಾದ ಉತ್ತರವನ್ನೇ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ನಟಿಯ ಮೊಬೈಲ್ ನ್ನು ಎನ್ ಸಿ ಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ವಾಟ್ಸಪ್ ಚಾಟ್ ಮಾಡಿದ್ದು ತಾವೇ ಎಂದು ನಟಿ ದೀಪಿಕಾ ಪಡುಕೋಣೆ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ