ನಟಿ ದೀಪಿಕಾ ಪಡುಕೋಣೆಗೆ ಡ್ರಗ್ ಲಿಂಕ್ ವಿಚಾರಣೆಯಲ್ಲಿ ಎಷ್ಟು ಪ್ರಶ್ನೆ ಕೇಳ್ತಾರೆ?

ಶನಿವಾರ, 26 ಸೆಪ್ಟಂಬರ್ 2020 (11:10 IST)
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಡ್ರಗ್ ಚಾಟ್ ಹಾಗೂ ಲಿಂಕ್ ಕೇಸ್ ಗೆ ಸಂಬಂಧಿಸಿದಂತೆ ಎನ್ ಸಿ ಬಿ ಎದುರು ವಿಚಾರಣೆಗಾಗಿ ಹಾಜರಾಗಿದ್ಧಾರೆ.

ದೀಪಿಕಾ ಪಡುಕೋಣೆಗೆ ಡ್ರಗ್ಸ್ ಚಾಟ್ ಹಿನ್ನೆಲೆಯಲ್ಲಿ ಎನ್‌ಸಿಬಿಯಿಂದ 20 ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

ದೀಪಿಕಾ ಪಡುಕೋಣೆ ಅವರಿಗೆ ಮಾದಕವಸ್ತು ನಿಯಂತ್ರಣ ಬ್ಯೂರೋದಿಂದ 20 ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು,  ಇದು 2017 ರಲ್ಲಿ ಕೊಕೊದಲ್ಲಿ ನಡೆದ ಪಾರ್ಟಿ, ವಾಟ್ಸಪ್ ಚಾಟ್ ಕುರಿತಾಗಿ ಪ್ರಶ್ನೆಗಳು ಇರಲಿವೆ.  

ಎನ್ ಸಿ ಬಿ ವಿಚಾರಣೆ ಹಿನ್ನಲೆಯಲ್ಲಿ ದೀಪಿಕಾ ಪಡುಕೋಣೆ ನಿವಾಸಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ. ಹಲವಾರು ಬಾಲಿವುಡ್ ಖ್ಯಾತನಾಮರು ಕೊಕೊದಲ್ಲಿ ನಡೆದ 2017 ರ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ