ಡ್ರಗ್ ಲಿಂಕ್ ಗೆ ಬೆದರಿದ ಬಾಲಿವುಡ್ ನಿರ್ಮಾಪಕ : ಡ್ರಗ್ ಅಂದ್ರೆ ಗೊತ್ತಿಲ್ಲ ಎಂದ
ಶನಿವಾರ, 26 ಸೆಪ್ಟಂಬರ್ 2020 (10:41 IST)
ಬಾಲಿವುಡ್ ನಲ್ಲಿ ಡ್ರಗ್ ಲಿಂಕ್ ಸಖತ್ ಸದ್ದು ಮಾಡುತ್ತಿದ್ದು, ಘಟಾನುಘಟಿ ನಾಯಕರು, ನಟಿಯರ ಸುತ್ತ ಮಾಫಿಯಾ ಬೆಳೆದುಕೊಂಡಿದೆ.
ಈ ನಡುವೆ ನಿರ್ಮಾಪಕ ಕರಣ್ ಜೋಹರ್ ನಡೆಸಿದ್ದಾರೆ ಎನ್ನಲಾದ ಡ್ರಗ್ಸ್ ಪಾರ್ಟಿಯ ವಿಡಿಯೋ ಸದ್ದು ಮಾಡಿತ್ತು. ಈ ಕುರಿತು ದೂರುಗಳೂ ದಾಖಲಾಗಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ನಿರ್ಮಾಪಕ ಕರಣ್ ಜೋಹರ್, ನಾನು ನಾರ್ಕೋಟಿಕ್ಸ್ ಅನ್ನು ಸೇವಿಸುವುದಿಲ್ಲ. ಡ್ರಗ್ಸ್ ಎಂದರೆ ನನಗೆ ಗೊತ್ತೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಬಾಲಿವುಡ್‌ನೊಂದಿಗಿನ ಡ್ರಗ್ ಲಿಂಕ್ ಪ್ರಕರಣವನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತನಿಖೆ ನಡೆಸುತ್ತಿದೆ. ಕಳೆದ ವರ್ಷ ಕರಣ್ ಜೋಹರ್ ನಿವಾಸದಲ್ಲಿ ನಡೆದ ಪಾರ್ಟಿಯಲ್ಲಿ ದೀಪಿಕಾ ಪಡುಕೋಣೆ, ವಿಕ್ಕಿ ಕೌಶಲ್, ರಣಬೀರ್ ಕಪೂರ್, ಶಾಹಿದ್ ಕಪೂರ್, ವರುಣ್ ಧವನ್, ಮಲೈಕಾ ಅರೋರಾ, ಜೋಯಾ ಅಖ್ತರ್, ಅರ್ಜುನ್ ಕಪೂರ್ ಮತ್ತು ಇತರರು ಭಾಗವಹಿಸಿದ್ದರು.