ಎಸ್ ಪಿ ಬಾಲಸುಬ್ರಹ್ಮಣ್ಯಂ ಅಗಲಿಕೆಗೆ ಕಂಬನಿ ಮಿಡಿದ ನಟ ಸಲ್ಮಾನ್ ಖಾನ್

ಶನಿವಾರ, 26 ಸೆಪ್ಟಂಬರ್ 2020 (12:09 IST)
ಸಂಗೀತ ಗಾರುಡಿಗ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕಂಬನಿ ಮಿಡಿದಿದ್ದಾರೆ.

ನಟ ಸಲ್ಮಾನ್ ಖಾನ್ ಅವರ ಕೆಲವು ಸೂಪರ್ ಹಿಟ್ ಚಿತ್ರಗಳಿಗೆ ಎಸ್ ಬಿ ಪಿ ಸಂಗೀತ ನೀಡಿದ್ದರು.
ಎಸ್ ಪಿ ಬಿ ಅವರ ಒಡನಾಟವನ್ನು ಸ್ಮರಣೆ ಮಾಡಿಕೊಂಡಿರುವ ನಟ ಸಲ್ಮಾನ್ ಖಾನ್, ಎಸ್ ಪಿ ಬಿ ಅವರೇ ನಿಮ್ಮ ಹಾಡುಗಳು ನನಗೆ ಯಾವಾತ್ತಿಗೂ ಸ್ಪಷೇಲ್. ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದು, ಮೇರು ಗಾಯಕನ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

‘ಮೈನೆ ಪ್ಯಾರ್ ಕಿಯಾ’ ಸಿನಿಮಾದ ಎಲ್ಲಾ ಗೀತೆಗಳನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದರು. ‘ಪತ್ತರ್ ಕೆ ಫೂಲ್’,  ‘ಹಮ್ ಆಪ್‌ಕೆ ಹೇ ಕೌನ್’, ‘ಅಂದಾಜ್ ಅಪ್ನಾ ಅಪ್ನಾ’ ‘ಲವ್’, ‘ಸಾಜನ್’ ಮೊದಲಾದ ಸಲ್ಮಾನ್ ಖಾನ್ ನಟನೆಯ ಚಿತ್ರಗಳಿಗೆ ಎಸ್ ಪಿ ಬಿ ಹಾಡಿದ್ದರು. 

‘ಹಮ್ ಆಪ್‌ಕೆ ಹೇ ಕೌನ್’ ಸಿನಿಮಾದಲ್ಲಿನ 14 ಹಾಡುಗಳಿಗೆ ಎಸ್‌ಪಿಬಿ ಹಾಗೂ ಲತಾ ಮಂಗೇಶ್ಕರ್ ಕಂಠದಾನ ಮಾಡಿದ್ದರು.  ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ