ಡ್ರಗ್ ಲಿಂಕ್ ದೀಪಿಕಾ ಪಡುಕೋಣೆಗೆ ಐದಾರು ಗಂಟೆ ಡ್ರಿಲ್

ಶನಿವಾರ, 26 ಸೆಪ್ಟಂಬರ್ 2020 (18:46 IST)
ಬಾಲಿವುಡ್ ಡ್ರಗ್ ಲಿಂಕ್ ಕೇಸ್ ಗೆ ಸಂಬಂಧಿಸಿದಂತೆ ನಟಿ ದೀಪಿಕಾ ಪಡುಕೋಣೆ ತೀವ್ರ ವಿಚಾರಣೆ ಎದುರಿಸಿದ್ದಾರೆ.

ಎನ್ ಸಿ ಬಿ ಮುಂದೆ ಬೆಳಗ್ಗೆ ಹಾಜರಾದ ನಟಿ ದೀಪಿಕಾಗೆ ಬರೋಬ್ಬರಿ ಐದಾರು ಗಂಟೆ ಡ್ರಿಲ್ ಮಾಡಲಾಗಿದೆ.
ನಟಿ ದೀಪಿಕಾ ಮತ್ತು ಅವರ ವ್ಯವಸ್ಥಾಪಕಿ ಕರೀಷ್ಮಾ ಪ್ರಕಾಶ್ ರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

 ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆ ವೇಳೆ ರಿಯಾ ಚಕ್ರವರ್ತಿ ಹಾಗೂ ಇತರರು ಡ್ರಗ್ ಲಿಂಕ್ ಬಗ್ಗೆ ಬಾಯಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಎನ್ ಸಿ ಬಿ ಅಧಿಕಾರಿಗಳು ಮಹತ್ವದ ವಿಷಯಗಳನ್ನು ಕಲೆ ಹಾಕುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ