'ಲಕ್ಕಿ ಭಾಸ್ಕರ್' ಬಿಡುಗಡೆ ಅಪ್‌ಡೇಟ್ ನೀಡಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ದುಲ್ಕರ್

Sampriya

ಮಂಗಳವಾರ, 9 ಜುಲೈ 2024 (20:14 IST)
Photo Courtesy X
ಮುಂಬೈ: ಖ್ಯಾತ ಮಲಯಾಳಂ ನಟ  ದುಲ್ಕರ್ ಸಲ್ಮಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಲಕ್ಕಿ ಭಾಸ್ಕರ್' ಗಣೇಶ ಹಬ್ಬದಂದು (2024 ಸೆಪ್ಟಂಬರ್ 7) ವಿಶ್ವದಾದ್ಯಂತ ಬಿಡುಗಡೆಯಾಲಿದೆ ಎಂದು ಚಿತ್ರತಂಡ ಹೇಳಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ದುಲ್ಕರ್ ಸಲ್ಮಾನ್ ಅವರು, ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಗಣೇಶ ಹಬ್ಬಕ್ಕೆ ನಿಮ್ಮ ಮುಂದೆ ಚಿತ್ರ ತೆರೆಗೆ ಬರಲಿದೆ ಎಂದು ಬರೆದುಕೊಂಡಿದ್ದಾರೆ.

'ವಾತಿ' ಖ್ಯಾತಿಯ ನಿರ್ದೇಶಕ ವೆಂಕಿ ಅಟ್ಲೂರಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಸಿತಾರಾ ಎಂಟರ್‌ಟೈನ್‌ಮೆಂಟ್‌ ಮತ್ತು ಫಾರ್ಚೂನ್‌ ಫೋರ್‌ ಸಿನಿಮಾಸ್‌ ಜಂಟಿಯಾಗಿ ನಿರ್ಮಾಣ ಮಾಡಿದೆ.

ಈ ಚಿತ್ರದಲ್ಲಿ ದುಲ್ಕರ್‌ಗೆ ಜೋಡಿಯಾಗಿ ಮೀನಾಕ್ಷಿ ಚೌಧರಿ ಅವರು ಅಭಿನಯಿಸಿದ್ದಾರೆ. ಈ ಸಿನಿಮಾ ತೆಲುಗು, ಮಲಯಾಳ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ