ಜೈಲು ಸೇರಿದರೂ ದರ್ಶನ್ ಗೆ ಬೇಡಿಕೆ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ

Krishnaveni K

ಮಂಗಳವಾರ, 9 ಜುಲೈ 2024 (08:52 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದರೂ ಅವರಿಗಿರುವ ಕ್ರೇಜ್ ಕಡಿಮೆಯಾಗಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ದರ್ಶನ್ ಜೈಲಿನಲ್ಲಿರುವಾಗಲೇ ಅವರ ಸಿನಿಮಾವೊಂದು ಮರು ಬಿಡುಗಡೆಯಾಗುತ್ತಿದೆ.

ದರ್ಶನ್ ಇಷ್ಟು ವರ್ಷದ ವೃತ್ತಿ ಜೀವನದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆ ಪೈಕಿ ಶಾಸ್ತ್ರಿ ಸಿನಿಮಾವೂ ಒಂದು. ವಿತರಕ ವಿಎಂ ಶಂಕರ್ ಶಾಸ್ತ್ರಿ ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ. ದರ್ಶನ್ ಜೈಲಿನಲ್ಲಿರುವಾಗಲೇ ಸಿನಿಮಾ ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಈ ಮೊದಲು ಕರ್ನಾಟಕದಲ್ಲಿ ಚಿತ್ರಮಂದಿರಗಳು ಬಣಗುಡುತ್ತಿರುವಾಗ ದರ್ಶನ್ ನಾಯಕರಾಗಿದ್ದ ಕಾಟೇರ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಇದರಿಂದ ಎಷ್ಟೋ ಜನರ ಬದುಕಿಗೆ ದಾರಿಯಾಗಿತ್ತು. ಇದೀಗ ಚಿತ್ರರಂಗದಲ್ಲಿ ಪ್ರತೀ ವಾರ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗದೇ ನಷ್ಟ ಅನುಭವಿಸುತ್ತಿವೆ.

ಹೀಗಾಗಿ ಹಲವು ಹಳೆಯ ಸಿನಿಮಾಗಳನ್ನೇ ಮರು ಬಿಡುಗಡೆ ಮಾಡಲಾಗುತ್ತಿದೆ. ಇದೀಗ ದರ್ಶನ್ ಸಿನಿಮಾವನ್ನೂ ಅದೇ ರೀತಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ದರ್ಶನ್ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವಾಗಲೂ ಜನ ಅವರನ್ನು ಸಿನಿಮಾವನ್ನು ನೋಡುತ್ತಾರಾ, ತಿರಸ್ಕರಿಸುತ್ತಾರಾ ಎಂದು ಕಾದುನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ