ಏಕ್ ಲವ್ ಯಾ ರಿಲೀಸ್ ಮುಂದೂಡಿಕೆ

ಬುಧವಾರ, 5 ಜನವರಿ 2022 (16:02 IST)
ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ, ರಾಣಾ ನಾಯಕರಾಗಿ ಪದಾರ್ಪಣೆ ಮಾಡುತ್ತಿರುವ ಏಕ್ ಲವ್ ಯಾ ಸಿನಿಮಾ ರಿಲೀಸ್ ಮುಂದೂಡಿಕೆಯಾಗಿದೆ.

ಈ ಮೊದಲು ಚಿತ್ರ ಜನವರಿ 21 ರಂದು ಬಿಡುಗಡೆಯಾಗುವುದಾಗಿ ಘೋಷಿಸಲಾಗಿತ್ತು. ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಿದ ಬೆನ್ನಲ್ಲೇ ಏಕ್ ಲವ್ ಯಾ ಬಿಡುಗಡೆ ಮುಂದೂಡಿಕೆ ಮಾಡುತ್ತಿರುವುದಾಗಿ ಪ್ರೇಮ್ ಹೇಳಿದ್ದಾರೆ.

ಥಿಯೇಟರ್ ನಲ್ಲಿ ಈಗ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಿದೆ. ಕೊರೋನಾ ಪರಿ‍ಸ್ಥಿತಿ ಸುಧಾರಿಸಿದ ಮೇಲೆ ನಿಮ್ಮ ಮುಂದೆ ಹೊಸ ದಿನಾಂಕದೊಂದಿಗೆ ಥಿಯೇಟರ್ ಗೆ ಬರುವುದಾಗಿ ಪ್ರೇಮ್ ಪ್ರಕಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ