ಕಿಚ್ಚ ಸುದೀಪ್ ಗೆ ನಕಲಿ ಸುದ್ದಿ ತಂದ ಫಜೀತಿ
ಕಿಚ್ಚ ಸುದೀಪ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಇದಕ್ಕೆ ನಮಸ್ತೆ ಘೋಷ್ ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ಸಾಹೋ ಸಿನಿಮಾ ಖ್ಯಾತಿಯ ನಿರ್ದೇಶಕ ಸುಜಿತ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಇದನ್ನೇ ಸತ್ಯವೆಂದು ನಂಬಿ ಹಲವರು ಈ ಸುದ್ದಿಯನ್ನು ಶೇರ್ ಮಾಡಿದ್ದರು.
ಆದರೆ ಅಸಲಿಗೆ ಸುದೀಪ್ ಇಂತಹದ್ದೊಂದು ಸಿನಿಮಾವನ್ನೇ ಒಪ್ಪಿಕೊಂಡಿಲ್ಲ. ಯಾರೋ ಬೇಕಂತಲೇ ಸುದೀಪ್ ಹೆಸರಿನಲ್ಲಿ ಇಂತಹದ್ದೊಂದು ಸುಳ್ಳು ಸುದ್ದಿ ಹರಡಿದ್ದರು.