ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶುಭಾ ಪೂಂಜಾ

ಬುಧವಾರ, 5 ಜನವರಿ 2022 (15:55 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟೂರಿನಲ್ಲಿ ಶುಭಾ ಮದುವೆಯಾಗಿದ್ದಾರೆ.

ಹುಟ್ಟೂರು ಮಜಲಬೆಟ್ಟುಬೀಡುವಿನಲ್ಲಿ ಸಂಬಂಧಿಕರು, ಆಪ್ತೇಷ್ಟರ ಸಮ್ಮುಖದಲ್ಲಿ ಸುಮಂತ್ ಮಹಾಬಲ ಜೊತೆಗೆ ಪುಜಾ ಇಂದು ವಿವಾಹವಾಗಿದ್ದಾರೆ. ಇವರಿಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು.

ಕಳೆದ ಬಾರಿ ಲಾಕ್ ಡೌನ್, ಕೊರೋನಾದಿಂದಾಗಿ ಇಬ್ಬರ ವಿವಾಹ ಮುಂದೂಡಿಕೆಯಾಗಿತ್ತು. ಇದಾದ ಬಳಿಕ ಶುಭಾ ಬಿಗ್ ಬಾಸ್ ಶೋನಲ್ಲಿ ಮಿಂಚಿದ್ದರು. ಇಂದು ಮದುವೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಶೇರ್ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ