39 ವರ್ಷಕ್ಕೆ ಕೊನೆಯುಸಿರೆಳೆದ ಖ್ಯಾತ ನಟಿ ಮಿಚೆಲ್ ಟ್ರಾಚ್ಟೆನ್‌ಬರ್ಗ್

Sampriya

ಗುರುವಾರ, 27 ಫೆಬ್ರವರಿ 2025 (18:51 IST)
Photo Courtesy X
ನ್ಯೂಯಾರ್ಕ್:"ಬಫಿ ದಿ ವ್ಯಾಂಪೈರ್ ಸ್ಲೇಯರ್" ಮತ್ತು "ಗಾಸಿಪ್ ಗರ್ಲ್" ಸೇರಿದಂತೆ ಸರಣಿ ಪಾತ್ರಗಳಿಗೆ ಹೆಸರುವಾಸಿಯಾದ ನಟಿ ಮಿಚೆಲ್ ಟ್ರಾಚ್ಟೆನ್‌ಬರ್ಗ್ ಅವರು ನಿಧನರಾಗಿದ್ದಾರೆ ಎಂದು ಯುಎಸ್ ಮಾಧ್ಯಮಗಳು ತಿಳಿಸಿವೆ. 39 ವರ್ಷದ ಮಿಚೆಲ್ ನಿಧನಕ್ಕೆ ಚಿತ್ರರಂಗ ಕಂಬನಿ ನುಡಿದಿದೆ.

ಬುಧವಾರ ಸ್ಥಳೀಯ ಸಮಯ  8:00 ಗಂಟೆಯಸ ಸುಮಾರಿಗೆ ಅಧಿಕಾರಿಗಳು ತುರ್ತು ಕರೆಯನ್ನು ಸ್ವೀಕರಿಸಿದ್ದಾರೆ. ಕೂಡಲೇ ಅವರು ಮಿಚೆಲ್ ಅವರಿದ್ದ ಮ್ಯಾನ್‌ಹ್ಯಾಟನ್ ಅಪಾರ್ಟ್‌ಮೆಂಟ್‌ಗೆ ತಲುಪಿದ್ದಾರೆ. ಈ ವೇಳೆ ಮಿಚೆಲ್ ಅವರು  ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು, ವೈದ್ಯರು ಅವರು ಈಗಾಗಲೇ ಕೊನೆಯುಸಿರೆಳೆದಿರುವುದಾಗಿ ದೃಢಪಡಿಸಿದ್ದಾರೆ. ಸಾವಿನ ಸುತ್ತ ಯಾವುದೇ ಅನುಮಾನ ವ್ಯಕ್ತವಾಗಿಲ್ಲ.

ಹರಿದಾಡುತ್ತಿರುವ ಸುದ್ದಿಯ ಪ್ರಕಾರ ನಟಿಯೂ ಈಚೆಗೆ ಯಕೃತ್ತಿನ ಕಸಿ ಮಾಡಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಬಾಲಕಲಾವಿದೆಯಾಗಿ ವೃತ್ತಿಜೀವನ್ನು ಆರಂಭಿಸಿದ ಮಿಚೆಲ್‌ ಅವರಿಗೆ ದೂರದರ್ಶನ ಸರಣಿ "ದಿ ಅಡ್ವೆಂಚರ್ ಆಫ್ ಪೀಟ್ & ಪೀಟ್" ಸೇರಿದಂತೆ ನಿಕೆಲೋಡಿಯನ್ ಕಿಡ್ಸ್ ನೆಟ್‌ವರ್ಕ್‌ನಲ್ಲಿ ಅವಳಿಗೆ ಹೆಚ್ಚಿನ ಜನಮನ್ನಣೆ ತಂದುಕೊಟ್ಟಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ