ಕೆಪಿ ಚೌಧರಿ ಆತ್ಮಹತ್ಯೆ, ರಜನಿಕಾಂತ್‌ಗೆ ಸಿನಿಮಾ ಮಾಡಿದ್ದ ಖ್ಯಾತ ನಿರ್ಮಾಪಕನಿಗೆ ಏನಾಯಿತು

Sampriya

ಮಂಗಳವಾರ, 4 ಫೆಬ್ರವರಿ 2025 (14:26 IST)
Photo Courtesy X
ಆಂಧ್ರಪ್ರದೇಶ: ಖ್ಯಾತ ಸಿನಿಮಾ ನಿರ್ಮಾಪಕ, ಡ್ರಗ್‌ ಪೆಡ್ಲರ್ ಕೆಪಿ ಚೌಧರಿ ಅವರ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಗೋವಾದಲ್ಲಿ ಪತ್ತೆಯಾಗಿದೆ.

2023ರಲ್ಲಿ ನಡೆದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚೌಧರಿ ಅವರನ್ನು ಪೊಲೀಸರು ಬಂಧಿಸಿದ್ದರು.  ಟಾಲಿವುಡ್‌ ಹಾಗೂ ಕಾಲಿವುಡ್‌ನ ಪ್ರಮುಖರಿಗೆ ಡ್ರಗ್ಸ್ ಸರಬರಾಜು ಮಾಡಿದ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿತ್ತು.

ಪ್ರಾಥಮಿಕ ತನಿಖೆಯಲ್ಲಿ ಕೆಪಿ ಚೌಧರಿ ಅವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ.  ಅದಲ್ಲದೆ ವೈಯಕ್ತಿಕ ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎನ್ನಲಾಗಿದೆ.

ಗೋವಾದಲ್ಲಿ OHM ಪಬ್ ಅನ್ನು ತೆರೆದರು, ಅಲ್ಲಿ ಅವರು ಪ್ರಸಿದ್ಧ ವ್ಯಕ್ತಿಗಳಿಗೆ ಮಾದಕವಸ್ತುಗಳನ್ನು ವಿತರಿಸಿದರು ಎಂಬ ಆರೋಪ ಕೇಳಿಬಂದಿತ್ತು.  ಸದ್ಯಕ್ಕೆ ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಮತ್ತು ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ