ಗಾಯಕ ಸಂಜಿತ್ ಹೆಗ್ಡೆ ವಿರುದ್ಧ ಮತ್ತೆ ಕೆಂಡಕಾರಿದ ಕೆ ಮಂಜು: ಗೆಲ್ಲಿಸಿದವರನ್ನೇ ಮರೆತ ಆರೋಪ

Krishnaveni K

ಸೋಮವಾರ, 3 ಫೆಬ್ರವರಿ 2025 (11:00 IST)
Photo Credit: X
ಬೆಂಗಳೂರು: ಜೀ ಕನ್ನಡ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದು ಈಗ ಬಾಲಿವುಡ್ ವರೆಗೆ ಅವಕಾಶ ಗಿಟ್ಟಿಸಿಕೊಂಡ ಕನ್ನಡದ ಗಾಯಕ ಸಂಜಿತ್ ಹೆಗ್ಡೆ ವಿರುದ್ಧ ನಿರ್ಮಾಪಕ ಕೆ ಮಂಜು ಮತ್ತೆ ಕಿಡಿ ಕಾರಿದ್ದಾರೆ.

ಸಂಜಿತ್ ಹೆಗ್ಡೆ ಕನ್ನಡದಿಂದಲೇ ಬೆಳೆದು ಬಂದವರು. ಈಗ ಕನ್ನಡ ಹಾಡು ಹಾಡಲು ದುಬಾರಿ ಸಂಭಾವನೆ ಕೇಳುತ್ತಿದ್ದಾರೆ ಎಂದು ಕೆ ಮಂಜು ಮೊನ್ನೆ ಮೊನ್ನೆಯಷ್ಟೇ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಮ್ಮೆ ಸಂಜಿತ್ ಹೆಗ್ಡೆ ವಿರುದ್ಧ ಖಾಸಗಿ ವಾಹಿನಿಯಲ್ಲಿ ಕಿಡಿ ಕಾರಿದ್ದಾರೆ.

ಕೆಲವು ಗಾಯಕರು ತಮ್ಮ ಮೂಲ ಭಾಷೆಗೆ ಕಡಿಮೆ ಸಂಭಾವನೆ ಪಡೆಯುತ್ತಾರೆ. ಆದರೆ ಸಂಜಿತ್ ಹೆಗ್ಡೆ ಹಾಗಲ್ಲ. ಸಂಜಿತ್ ಕೂಡಾ ಕನ್ನಡಕ್ಕೆ ಕಡಿಮೆ ಸಂಭಾವನೆ ಕೇಳಬೇಕು. ಗೆಲ್ಲಿಸಿದವರನ್ನು ಮರೆಯಬಾರದು’ ಎಂದು ಕೆ ಮಂಜು ಹೇಳಿದ್ದಾರೆ.

ಅವರ ಈ ಕಾಮೆಂಟ್ ಗೆ ಹಲವು ಪರ-ವಿರೋಧ ಕಾಮೆಂಟ್ ಗಳು ವ್ಯಕ್ತವಾಗಿದೆ. ನಿಮಗೆ ಸಂಜಿತ್ ಹೆಗ್ಡೆ ಇಷ್ಟವಿಲ್ಲ ಎಂದರೆ ಅವರಂತೆ ಹಾಡುವ ಬೇರೆ ಸಾಕಷ್ಟು ಕನ್ನಡ ಪ್ರತಿಭೆಗಳಿದ್ದಾರೆ. ಅವರಿಗೆ ಅವಕಾಶ ಕೊಡಿ. ಅದು ಬಿಟ್ಟು ನಿತ್ಯವೂ ಮಾಧ್ಯಮಗಳಲ್ಲಿ ಸಂಜಿತ್ ವಿರುದ್ಧ ಆರೋಪ ಮಾಡುವುದರಲ್ಲಿ ಅರ್ಥವೇನಿದೆ ಎಂದಿದ್ದಾರೆ. ಇನ್ನು ಕೆಲವರು ಸಂಜಿತ್ ಕನ್ನಡಕ್ಕೆ ಮೊದಲ ಆದ್ಯತೆ ಕೊಡಲಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ