ಫೈಟರ್ ವಿವೇಕ್ ಸಾವು: ಮೌನಕ್ಕೆ ಶರಣಾದ ಸ್ಯಾಂಡಲ್ ವುಡ್

ಬುಧವಾರ, 11 ಆಗಸ್ಟ್ 2021 (12:41 IST)
ಬೆಂಗಳೂರು: ಲವ್ ಯೂ ರಚ್ಚು ಚಿತ್ರೀಕರಣ ವೇಳೆ ಫೈಟರ್ ವಿವೇಕ್ ದುರಂತ ಸಾವಾಗಿತ್ತು. ಆದರೆ ಈ ಬಗ್ಗೆ ಚಿತ್ರರಂಗ ಮೌನವಾಗಿರುವುದು ನಿಜಕ್ಕೂ ವಿಪರ್ಯಾಸ.
Photo Courtesy: Google


ದುರಂತ ನಡೆದ ಬಳಿಕ ಲವ್ ಯೂ ರಚ್ಚು ಚಿತ್ರತಂಡ ಸ್ಥಳದಿಂದ ಪರಾರಿಯಾಗಿತ್ತು. ನಿರ್ಮಾಪಕ ಗುರುದೇಶ್ ಪಾಂಡೆ ತಲೆಮರೆಸಿಕೊಂಡಿದ್ದರು. ಘಟನೆಗಳು ಕಾರಣಗಳು ಏನೇ ಇರಬಹುದು. ಆದರೆ ಇದರಿಂದ ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡಿದೆ.

ಈ ಬಗ್ಗೆ ವಿವೇಕ್ ಕುಟುಂಬಕ್ಕೆ ಸಾಂತ್ವನವಾಗಲೀ, ಸಹಾಯವಾಗಲೀ ಚಿತ್ರರಂಗದ ಕಡೆಯಿಂದ ಬರದೇ ಹೋಗಿದ್ದು ಮಾತ್ರ ದುರಂತ. ಇದು ಸಾಹಸ ಕಲಾವಿದರ ಬದುಕಿಗೆ ಎಷ್ಟು ರಿಸ್ಕ್ ಇದೆ ಎಂದು ಮತ್ತೊಮ್ಮೆ ತೋರಿಸಿಕೊಟ್ಟ ಘಟನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ