ಲಾಕ್ ಡೌನ್ ತೆರವಾದರೂ ಚಿತ್ರರಂಗಕ್ಕೆ ಮಾತ್ರ ನಿರಾಸೆ

ಮಂಗಳವಾರ, 2 ಜೂನ್ 2020 (09:05 IST)
ಬೆಂಗಳೂರು: ಲಾಕ್ ಡೌನ್ ಮುಗಿದು ಈಗ ಅನ್ ಲಾಕ್ ಪ್ರಕ್ರಿಯೆ ಹಂತ ಹಂತವಾಗಿ ಜಾರಿಯಲ್ಲಿದೆ. ಈಗಾಗಲೇ ಸಾರಿಗೆ, ಕಚೇರಿ, ಮಾಲ್ ಓಪನ್ ಮಾಡಲು ಅನುಮತಿ ನೀಡಲಾಗಿದೆ. ಆದರೆ ಚಿತ್ರರಂಗಕ್ಕೆ ಮಾತ್ರ ಇನ್ನೂ ಸಿಹಿ ಸುದ್ದಿ ಸಿಕ್ಕಿಲ್ಲ.


ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಇನ್ನೂ ಒಪ್ಪಿಗೆ ನೀಡಿಲ್ಲ. ಸಿನಿಮಾ ಚಿತ್ರೀಕರಣವೂ ಸಾಧ‍್ಯವಾಗುತ್ತಿಲ್ಲ. ಹೀಗಾಗಿ ಚಿತ್ರಮಂದಿರದ ಮಂದಿ ನಿರಾಸೆಯಲ್ಲಿದ್ದಾರೆ.

ನಮಗೂ ಚಿತ್ರೀಕರಣಕ್ಕೆ ಅನುಮತಿ ಕೊಡಿ ಎಂದು ಈಗಾಗಲೇ ಚಲನಚಿತ್ರ ಮಂಡಳಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಬಹುಶಃ ಒಂದು ವಾರದ ಬಳಿಕ ಅನುಮತಿ ಸಿಗುವ ನಿರೀಕ್ಷೆಯಿದೆ. ಅಲ್ಲಿಯವರೆಗೆ ಅನಿವಾರ್ಯವಾಗಿ ಸಿನಿ ಕಲಾವಿದರು ಕಾಯಲೇಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ