ಥಿಯೇಟರ್ ನಲ್ಲಿ ಫ್ಲಾಪ್ ಆದ ಪ್ರಮುಖ ಸಿನಿಮಾಗಳು ಒಟಿಟಿಗೆ ಬರ್ತಿವೆ

ಶುಕ್ರವಾರ, 15 ಸೆಪ್ಟಂಬರ್ 2023 (09:10 IST)
ಹೈದರಾಬಾದ್: ಇತ್ತೀಚೆಗೆ ಬಿಡುಗಡೆಯಾದ ಕೆಲವು ಬಹುನಿರೀಕ್ಷಿತ ಸಿನಿಮಾಗಳು ಥಿಯೇಟರ್ ನಲ್ಲಿ ಸೋಲುಂಡ ಬಳಿಕ ಈಗ ಒಟಿಟಿಯಲ್ಲಿ ಅದೃಷ್ಟ ಪರೀಕ್ಷೆಗೆ ಬರುತ್ತಿವೆ.

ವಿಜಯ್ ದೇವರಕೊಂಡ-ಸಮಂತಾ ಅಭಿನಯದ ಖುಷಿ ಸಿನಿಮಾ ಮೊದಲ ಎರಡು ದಿನ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಂಡು 50 ಕೋಟಿ ಗಳಿಕೆ ಮಾಡಿತ್ತು. ಆದರೆ ಆ ಬಳಿಕ ಸಿನಿಮಾ ಮಕಾಡೆ ಮಲಗಿತ್ತು. ವಿತರಕರು ನಷ್ಟ ಅನುಭವಿಸಿದ್ದರು. ಈ ಸಿನಿಮಾ ಈಗ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಲಿದೆ.

ಮೆಗಾಸ್ಟಾರ್ ಚಿರಂಜೀವಿ ನಾಯಕರಾಗಿರುವ ಭೋಳಾಶಂಕರ್ ಹೇಳಿಕೊಳ್ಳುವ ಯಶಸ್ಸು ಪಡೆದಿರಲಿಲ್ಲ. ಈ ಸಿನಿಮಾವೂ ನೆಟ್ ಫ್ಲಿಕ್ಸ್ ನಲ್ಲಿ ಇಂದಿನಿಂದ ಪ್ರಸಾರ ಆರಂಭಿಸಿದೆ. ಇದರ ಜೊತೆಗೆ ಗೋಪಿಚಂದ್ ನಾಯಕರಾಗಿರುವ ರಾಮಬಾಣಂ ಸಿನಿಮಾ ಕೂಡಾ ಇಂದಿನಿಂದ ಆಹಾ ಒಟಿಟಿ ಚಾನೆಲ್ ನಲ್ಲಿ ಪ್ರಸಾರ ಕಾಣಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ